ವಿದ್ಯುತ್ ಸಮಸ್ಯೆ:ಪೊಲೀಸ್ ವಸತಿ ಗೃಹಕ್ಕೆ ತಮ್ಮ ಸ್ವಂತ ಖರ್ಚಿನಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ನಾಪೋಕ್ಲು ಗ್ರಾ.ಪಂ ಸದಸ್ಯ ಮಹಮ್ಮದ್ ಖುರೇಶಿ
admincoorgdaily
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಸಮಸ್ಯೆ ಉಂಟಾಗಿ ಜನರು ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಂತೆ ನಾಪೋಕ್ಲುವಿನ ಪೊಲೀಸ್ ವಸತಿಗೃಹದಲ್ಲಿ ವಾಸವಿರುವ, ಪೋಲೀಸ್ ಕುಟುಂಬಕ್ಕೂ ಕೂಡ ವಿದ್ಯುತ್ ಸಮಸ್ಯೆ ಬಿಸಿ ತಟ್ಟಿತ್ತು.
ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೂ ಕೂಡ ಪೊಲೀಸ್ ಕುಟುಂಬ ಸಮಸ್ಯೆಯನ್ನು ಎದುರಿಸಿದ್ದರು. ಇದನ್ನು ಮನಗಂಡು ನಾಪೋಕ್ಲುವಿನ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಖುರೇಷಿಯವರು ತಮ್ಮ ನಿವಾಸದಿಂದ ಜನರೇಟರ್ ಬಳಸಿ ಸಿಂಟೆಕ್ಸ್ ನಲ್ಲಿ ನೀರು ತುಂಬಿ ವಸತಿಗೃಹದಲ್ಲಿರುವ ಪೋಲೀಸರ ಕುಟುಂಬಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಮಾನವೀಯ ಕಾರ್ಯಕ್ಕೆ ವಸತಿಗೃಹದ ಪೊಲೀಸ್ ಕುಟುಂಬವು ಕೃತಜ್ಞತೆ ಸಲ್ಲಿಸಿದ್ದಾರೆ.