ಆನೆ-ಮಾನವ ಸಂಘರ್ಷ: ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ:ಆನೆ-ಮಾನವ ಸಂಘರ್ಷದಿಂದ ವಿರಾಜಪೇಟೆ ಮತ ಕ್ಷೇತ್ರದ ಜನ ಹಾಗೂ ಕೊಡಗು ಜಿಲ್ಲೆ ಅನುಭವಿಸುತ್ತಿರುವಂತ ವೇದನೆಯನ್ನು, ಕೊಡಗಿನ ಜನ ಅನುಭವಿಸುತ್ತಿರುವ ಸಮಸ್ಯೆಯನ್ನ, ಉಂಟಾಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿಯನ್ನ ಮುಂದಿನ ದಿನಗಳಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ಶೂನ್ಯ ವೇಳೆಯಲ್ಲಿ ಸದನದ ಗಮನ ಸೆಳೆದು.
ರಾಜ್ಯ ಸರಕಾರ ತಕ್ಷಣವೇ ಸ್ಪಂದಿಸಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಪ್ರಸ್ತಾಪಿಸಿದರು. ಹಾಗೆಯೇ ಇದು ಕೇಂದ್ರ ಹಾಗೂ ರಾಜ್ಯ ಇಬ್ಬರ ಹೊಣೆಯಾಗಿರುತ್ತದೆಂದು ಪ್ರಸ್ತಾಪಿಸಿದರು.
ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದರು ಸಹ ಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿರಲಿಲ್ಲ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ಕರ್ನಾಟಕಕ್ಕೆ ಸೀಮಿತವಾದಂತೆ ಶೂನ್ಯವಾಗಿರುತ್ತದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆ ಸೇರಿ ಪರಿಹಾರ ಕಂಡುಕೊಳ್ಳಬೇಕೆಂಬ ವಿಚಾರವನ್ನು ಸಹ ಪ್ರಸ್ತಾಪಿಸಿದರು. ಇಂತಹ ಗಂಭೀರ ವಿಷಯವನ್ನು ಮಾನ್ಯ ಪೊನ್ನಣ್ಣ ರವರು ಸದನದಲ್ಲಿ ಮಂಡನೆ ಮಾಡುತ್ತಿದ್ದರು ಸಹ, ತನ್ನದೇ ಆದಂತಹ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದಂತಹ ವಿರೋಧಪಕ್ಷಗಳು ಜನರ ಸಮಸ್ಯೆಯನ್ನ ಚರ್ಚೆ ಮಾಡಲು ಅವಕಾಶ ಮಾಡುತ್ತಿಲ್ಲ ಎಂದು ಬಿಜೆಪಿಯ ಮೇಲೆ ಕಿಡಿ ಕಾರಿದರು.
ಮಾನ್ಯ ರಾಜ್ಯ ಸಚಿವರು ತಕ್ಷಣ ಸ್ಪಂದಿಸಬೇಕು ಕ್ಷೇತ್ರಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು. ಅರಣ್ಯ ಸಚಿವರ ಪರವಾಗಿ ಮಾನ್ಯ ಸಚಿವರಾದ ಕೃಷ್ಣ ಬೈರೇಗೌಡರು ತಕ್ಷಣವೇ ಉತ್ತರ ನೀಡಿರುತ್ತಾರೆ. ಜಿಲ್ಲೆಯಲ್ಲಿ ನಾಟಕವಾದಂತಹ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರು ಈ ವಿಷಯವನ್ನು ಪ್ರಸ್ತಾಪ ಮಾಡಿಸುವ ಸಂದರ್ಭದಲ್ಲಿ ಸದನ ಅಡ್ಡಿಪಡಿಸಿರುವಂಥದ್ದು ನಿಜವಾಗಲೂ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗೂ ಭಾರತೀಯ ಜನತಾ ಪಕ್ಷದ ನಾಟಕವನ್ನು ಬಯಲು ಮಾಡಿರುತ್ತದೆ ಎಂಬುದು ಸ್ಪಷ್ಟ ಎಂದು ಹೇಳಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
