ಎಮ್ಮೆಮಾಡು: ವಾಸದ ಮನೆಯ ಮುಂಭಾಗ ಗೋಡೆ ಕುಸಿತ
ನಾಪೋಕ್ಲು:ಸಮೀಪದ ಎಮ್ಮೆಮಾಡು ಗ್ರಾಮದ ಕರೀಂ ಟಿಎ ರವರ ವಾಸದ ಮನೆಯ ಮುಂಭಾಗದ ಗೋಡೆ ಕುಸಿದು ಹಾನಿಯಾಗಿದೆ.ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹಾಗೂ ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಸದ್ರಿಯವರಿಗೆ ಸದ್ಯ ಬೇರೆಡೆಗೆ ಸ್ಥಳಾಂತರಕ್ಕೆ ಸಲಹೆ ನೀಡಲಾಗಿದೆ.