ರೋಶನಾರದಲ್ಲಿ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರಿಗೆ ಭಾವಪೂಣ೯ ಪುಪ್ಪ ನಮನ

ರೋಶನಾರದಲ್ಲಿ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರಿಗೆ ಭಾವಪೂಣ೯ ಪುಪ್ಪ ನಮನ

ಮಡಿಕೇರಿ ಜ.28 - ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರ 127 ನೇ ಜನ್ಮಜಯಂತಿಯನ್ನು ಮಡಿಕೇರಿಯ ರೋಶನಾರದಲ್ಲಿ ಪುಪ್ಪನಮನದ ಮೂಲಕ ಬಾವಪೂಣ೯ವಾಗಿ ಆಚರಿಸಲಾಯಿತು.

ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ನೆಚ್ಚಿನ ಮನೆಯಾಗಿದ್ದ ನಗರದ ಹೊರವಲಯದಲ್ಲಿನ ರೋಶನಾರ ಬಳಿಯಲ್ಲಿರುವ ಕಾಯ೯ಪ್ಪ ಅವರ ಸಮಾಧಿ ಸ್ಥಳಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು. ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳಿಂದ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತ ಗಾಯನ ಜರುಗಿತು.

 ಈ ಸಂದಭ೯ ಮಾತನಾಡಿದ ಕಾಯ೯ಪ್ಪ ಅವರ ಪುತ್ರ ನಿವೖತ್ತ ಏರ್ ಮಾಷ೯ಲ್ ನಂದಾಕಾಯ೯ಪ್ಪ, ಪ್ರತೀಯೋವ೯ ಭಾರತೀಯನಿಗೂ ತನ್ನ ದೇಶ ಮೊದಲಾಗಬೇಕು. ಭಾರತೀಯತೆ ಆದ್ಯತೆಯಾಗಿರಬೇಕು. ಕೖತಕ ಬುದ್ದಿಮತ್ತೆಯ ಪ್ರಬಾವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ನಿಜವಾಗಿರುವುದಿಲ್ಲ. ಯಾವುದೇ ವಿಚಾರಗಳನ್ನು ಪರಾಮಶಿ೯ಸಿ ಎಂದು ಕಿವಿಮಾತು ಹೇಳಿದರು.

ಯಾವುದೇ ವೖತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಎಲ್ಲಾ ಸೌಲಭ್ಯಗಳೊಂದಿಗೆ ದೇಶಸೇವೆಗೆ ಪ್ರಾಮುಖ್ಯತೆ ನೀಡುವ ಭಾರತೀಯ ಸೇನಾ ಪಡೆಯಲ್ಲಿ ಕಾಯ೯ನಿವ೯ಹಿಸಲು ಆದ್ಯತೆ ನೀಡಿ ಎಂದೂ ಅವರು ಕಿವಿಮಾತು ಹೇಳಿದರು. ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಪುತ್ರಿ ನಳಿನಿ ಕಾಯ೯ಪ್ಪ ಸಮಾಧಿ ಸ್ಥಳದಲ್ಲಿ ಜ್ಯೋತಿ ಬೆಳಗಿದರು.

ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕುರಿತು ಪ್ರಬಂಧ ಸ್ಪಧೆ೯ಯಲ್ಲಿ ಪ್ರಥಮ ಬಹುಮಾನ ಪಡೆದ ಕೂಡಿಗೆ ಸೈನಿಕ ಶಾಲಾ ಕೆಡೆಟ್ ಧ್ರುವ್ ಭಾರದ್ವಜ್ ಅವರಿಗೆ ಕಾಯ೯ಪ್ಪ ಅವರ ಸೊಸೆ ಮೀನಾ ಕಾಯ೯ಪ್ಪ ಟ್ರೋಫಿ ಪ್ರಧಾನ ಮಾಡಿದರು. ಕೊಕ್ಕಲೇರ ಮಹತ್ವ ಅಪ್ಪಯ್ಯ ಅವರಿಂದ ಕಾಯ೯ಪ್ಪ ಕುರಿತಾಗಿ ಮಾಹಿತಿ ನೀಡಲ್ಪಟ್ಟಿತ್ತು.

ಪೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರಿಗೆ ಪ್ರಿಯವಾಗಿದ್ದ ಹೇಳಿಕೆಗಳನ್ನು ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳು ವಾಚಿಸಿದರು. ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿದೇ೯ಶಕರಾದ ಗುರುದತ್, ನಿಯತಾ ದೇವಯ್ಯ, ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ , ನಿವೖತ್ತ ಕನ೯ಲ್ ಬಿ.ಜಿ.ವಿ. ಕುಮಾರ್, ಕನ೯ಲ್ ಕಾವೇರಪ್ಪ ಪ್ರೇಮ್ ನಾಥ್, ಬಾಬು ಸೋಮಯ್ಯ, ಹಾಜರಿದ್ದರು. ಸೇರಿದಂತೆ ಮಾಜಿ ಸೈನಿಕರು, ಕೊಡಗು ವಿದ್ಯಾಲಯದ ಎನ್ ಸಿಸಿ ಕೆಡೆಟ್ ಗಳು, ವಿದ್ಯಾಥಿ೯, ಶಿಕ್ಷಕರು, ಕೂಡಿಗೆ ಶಾಲಾ ವಿದ್ಯಾಥಿ೯ಗಳು ಹಾಜರಿದ್ದರು.