ಸೈನಿಕಶಾಲೆ ಸೇರಲಿಚ್ಚಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾಹಿತಿ ಕಾಯಾ೯ಗಾರ
admincoorgdaily

ಮಡಿಕೇರಿ ಜು. 31.- ಸೈನಿಕಶಾಲೆಗಳ 6 ಮತ್ತು 9, ನೇ ತರಗತಿಗೆ ಸೇಪ೯ಡೆ ಸಂಬಂಧಿತ ವಿದ್ಯಾಥಿ೯ ಮತ್ತು ಪೋಷಕರಲ್ಲಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ತರಬೇತಿ ಕಾಯಾ೯ಗಾರ ಆಯೋಜಿಸಲಾಗಿದೆ.
ನಗರದ ಸಕಾ೯ರಿ ಬಸ್ ನಿಲ್ದಾಣ ಬಳಿಯಿರುವ ಕೊಡಗು ಶಿಶುಕಲ್ಯಾಣ ಸಂಸ್ಥೆಯಲ್ಲಿ ಆಗಸ್ಟ್ 9 ನೇಯ ಭಾನುವಾರದಿಂದ ಪ್ರತೀ ಭಾನುವಾರಗಳಂದು 20 ಭಾನುವಾರಗಳ ಕಾಲ ಸೈನಿಕ ಶಾಲಾ ಪರೀಕ್ಷಾ ಮಾಹಿತಿ ಕಾಯಾ೯ಗಾರ ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ.
ಸರಗೂರು ಸೈನಿಕಶಾಲೆಯ ಪರಿಣಿತ ಅಧ್ಯಾಪಕರು ಸೇರಿದಂತೆ ವಿವಿಧ ವಿಷಯ ತಜ್ಞರು ಈ ಕಾಯಾ೯ಗಾರದಲ್ಲಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಆಗಸ್ಟ್ 9 ರಂದು ಭಾನುವಾರ ಬೆಳಗ್ಗೆ 9.30 ಗಂಟೆಗೆ ಮಡಿಕೇರಿಯಲ್ಲಿ ಉದ್ಘಾಟನೆ ನಂತರ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ಶಿಬಿರ ಆಯೋಜಿತವಾಗಿದೆ. ಸೈನಿಕಶಾಲೆಗೆ ಸೇರಲಿಚ್ಚಿಸುವ ಕೊಡಗಿನ ವಿದ್ಯಾಥಿ೯ಗಳು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಪಿ. ಆರ್.ಕೋರಿದ್ದಾರೆ. ಹೆಚ್ಚಿನ ಮಾಹಿತಿಗ ಸಂಪಕ೯ ಸಂಖ್ಯೆ ಡಾ. ಸಿ. ಆರ್. ಪ್ರಶಾಂತ್ -9448246950,, ಅಂಕಾಚಾರಿ 9964103322., ಕ್ಯಾರಿ ಕಾರ್ಯಪ್ಪ. 98809 54514.