ರೋಚಕ ಘಟ್ಟದತ್ತ ರಾಜ್ಯ ಮಟ್ಟದ ಬಾಲಕರ ಫುಟ್ಬಾಲ್ ಪಂದ್ಯಾವಳಿ: DYES ಹಾಗೂ ಬೆಳಗಾವಿ ವಿಭಾಗದ ನಡುವೆ ರೋಚಕ ಪಂದ್ಯ! ಗೆಲ್ಲುವ ತಂಡಕ್ಕೆ ಚಾಂಪಿಯನ್ ಪಟ್ಟ!

ರೋಚಕ ಘಟ್ಟದತ್ತ ರಾಜ್ಯ ಮಟ್ಟದ ಬಾಲಕರ ಫುಟ್ಬಾಲ್ ಪಂದ್ಯಾವಳಿ: DYES  ಹಾಗೂ ಬೆಳಗಾವಿ ವಿಭಾಗದ ನಡುವೆ ರೋಚಕ ಪಂದ್ಯ!  ಗೆಲ್ಲುವ ತಂಡಕ್ಕೆ ಚಾಂಪಿಯನ್ ಪಟ್ಟ!

ಮಡಿಕೇರಿ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಉಪನಿರ್ದೇಶಕರ ಕಛೇರಿ,ಶಾಲಾ ಶಿಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವಿರಾಜಪೇಟೆ ತಾಲ್ಲೂಕು ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಇವರ ಸಹಯೋಗದೊಂದಿಗೆ ಅಮ್ಮತ್ತಿಯ ಪ್ರೌಢಶಾಲಾ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 17 ವರ್ಷ ವಯೋಮಾನದ ಬಾಲಕರ ಪಂದ್ಯಾವಳಿ ರೋಚಕ ಘಟದತ್ತ ತಲುಪಿದ್ದು,ಬೆಳಗಾವಿ ಹಾಗೂ DYES ನಡುವೆ ಅಂತಿಮ ಪಂದ್ಯ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿದೆ.

DYES ತಂಡವು ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿ 09 ಅಂಕಗಳನ್ನು ಪಡೆದುಕೊಂಡಿದೆ. ಬೆಳಗಾವಿ ವಿಭಾಗ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿ ಒಂದು ಪಂದ್ಯದಲ್ಲಿ ಡ್ರಾ ಪಡೆದುಕೊಂಡು‌ 7 ಅಂಕಗಳನ್ನು ಪಡೆದುಕೊಂಡಿದೆ. ಗೆಲುವು ಪಡೆಯುವ ತಂಡ ರಾಜ್ಯ ಮಟ್ಟದ 17 ವರ್ಷದ ಬಾಲಕರ ಪಂದ್ಯದಲ್ಲಿ ಗೆಲುವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ.