ಯುಪಿಎಸ್‍ಸಿ/ಕೆಎಎಸ್ ತರಬೇತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಯುಪಿಎಸ್‍ಸಿ/ಕೆಎಎಸ್ ತರಬೇತಿಗೆ  ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಮಡಿಕೇರಿ:-ಪ್ರಸಕ್ತ (2025-26) ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಯುಪಿಎಸ್‍ಸಿ/ಕೆಎಎಸ್ ಗೆಜೆಟೆಡೆ ಪ್ರೊಬೇಷನರ್ ವಸತಿ ಯುತ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ಹಾಗೂ ಕೆಪಿಎಸ್‍ಎಲ್ ಗ್ರೂಪ್-ಸಿ, ಆರ್‍ಆರ್‍ಬಿ ಮತ್ತು ಎಸ್‍ಎಸ್‍ಸಿ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದ್ದು, ಈ ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.