ಅಮ್ಮತ್ತಿಯಲ್ಲಿ ಫಿಫಾ ಫ್ಯಾನ್ಸ್ ಫೀಸ್ಟಾ: ಅಂತರರಾಷ್ಟ್ರೀಯ ಗುಣಮಟ್ಟದ ಮೈದಾನದ ಭರವಸೆ ನೀಡಿದ ಶಾಸಕ ಪೊನ್ನಣ್ಣ
ಮಡಿಕೇರಿ:ಫುಟ್ಬಾಲ್ ಜಗತ್ತಿನ ಅತ್ಯಂತ ಪ್ರಸಿದ್ಧ ಕ್ರೀಡೆಯಾಗಿದ್ದು,ಕ್ರೀಡೆಗೆ ಜಾತಿ,ಧರ್ಮ,ಜನಾಂಗ ಎಲ್ಲವನ್ನೂ ಮೀರಿ ಎಲ್ಲರನ್ನೂ ಒಂದೆಡೆ ಸೇರಿಸುವ ಶಕ್ತಿ ಇದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು.
ಅಮ್ಮತ್ತಿಯಲ್ಲಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಫಿಫಾ ಫ್ಯಾನ್ಸ್ ಫೀಸ್ಟಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.ಫುಟ್ಬಾಲ್ ಆಟಕ್ಕೆ ವಿಶ್ವದಲ್ಲಿ ಅತೀ ಹೆಚ್ಚು ಅಭಿಮಾನಿಗಳು ಹೊಂದಿದ್ದಾರೆ.ವಿಶ್ವದಲ್ಲಿ ಇದೀಗ ಫಿಫಾ ವರ್ಲ್ಡ್ ಕಪ್ ನಡೆಯುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಕೂಡ ವಿವಿಧ ದೇಶಗಳ ಆಟಗಾರರಿಗೆ ಬೆಂಬಲಿಸಿ ಶುಭಕೋರಿದ್ದಾರೆ.ವಿಶೇಷವಾಗಿ ಅಮ್ಮತ್ತಿಯಲ್ಲಿ ಎಲ್ಲಾ ತಂಡಗಳ ಆಟಗಾರರ ಬ್ಯಾನರ್ ಹಾಕುವುದರ ಮೂಲಕ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದು ಸಂತೋಷದ ವಿಷಯ.ಸಣ್ಣ ಮಕ್ಕಳು ಕೂಡ ಫಿಪಾ ವರ್ಲ್ ಕಪ್ ಕ್ರೇಜ್ ನಲ್ಲಿ ಇದ್ದಾರೆ.ಮಿಲನ್ಸ್ ಫುಟ್ಬಾಲ್ ಕ್ಲಬ್ ರಾಷ್ಟ್ರ ಫುಟ್ಬಾಲ್ ಪಂದ್ಯಾವಳಿಯನ್ನು ಈ ಹಿಂದೆ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಆಯೋಜಿಸಿದ್ದರು.ಫಿಫಾ ಫ್ಯಾನ್ ಫೀಸ್ಟಾ ಕಾರ್ಯಕ್ರಮವನ್ನು ನೋಡುವಾಗ ವರ್ಲ್ಡ್ ಫುಟ್ಬಾಲ್ ನೋಡಿದಂತಹ ಅನುಭವವಾಗುತ್ತಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಅತ್ಯುತ್ತಮ ಫುಟ್ಬಾಲ್ ಆಟಗಾರರು ಇದ್ದಾರೆ.ವಿಶೇಷವಾಗಿ ಅಮ್ಮತ್ತಿ ಭಾಗದಲ್ಲಿ ಉತ್ತಮ ಫುಟ್ಬಾಲ್ ಆಟಗಾರರು ಇದ್ದು,ಮುಂದಿನ ದಿನಗಳಲ್ಲಿ ಇದೇ ಭಾಗದಲ್ಲಿ ಖಂಡಿತವಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಫುಟ್ಬಾಲ್ ಆಟದ ಮೈದಾನವನ್ನು ಖಂಡಿತವಾಗಿ ನಿರ್ಮಾಣ ಮಾಡುತ್ತೇನೆ ಎಂದು ಶಾಸಕ ಎಎಸ್ ಪೊನ್ನಣ್ಣ ಅವರು ಭರವಸೆ ನೀಡಿದರು.
ನಾನು ಬ್ರೆಜಿಲ್ ತಂಡದ ಅಭಿಮಾನಿ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಫುಟ್ಬಾಲ್ ಕ್ರೀಡೆಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ.ಯುವಕರು ಫುಟ್ಬಾಲ್ ಕ್ರೀಡೆಯತ್ತ ಆಸಕ್ತಿ ತೋರಿದ್ದಾರೆ.ಭವಿಷ್ಯದಲ್ಲಿ ಭಾರತ ತಂಡ ಕೂಡ ಫಿಫಾ ವರ್ಲ್ಡ್ ಕಪ್ ನಲ್ಲಿ ಭಾಗವಹಿಸುವ ವಿಶ್ವಾಸ ಹೊಂದಿದ್ದೇನೆ.ನಾನು ಬ್ರೆಜಿತ್ ತಂಡದ ಅಭಿಮಾನಿಯಾಗಿದ್ದು,ಬ್ರೆಜಿಲ್ ಫುಟ್ಬಾಲ್ ತಂಡವನ್ನು ಹೆಚ್ಚು ಇಷ್ಟ ಪಡುತ್ತೇನೆ.ಆದರೆ ಅಮ್ಮತ್ತಿಯಲ್ಲಿ ನೋಡಿದರೆ ಸಣ್ಣ ಮಕ್ಕಳು ಕೂಡ ಅರ್ಜೆಂಟೀನಾ ತಂಡದ ಜೆರ್ಸಿ ಹಾಕಿದ್ದಾರೆ ಎಂದು ಶಾಸಕ ಎಎಸ್ ಪೊನ್ನಣ್ಣ ಹೇಳಿದರು.
ಅರ್ಜೆಂಟೀನಾ ತಂಡ ಜೆರ್ಸಿ ಮತ್ತು ಕ್ಯಾಪ್ ಹಸ್ತಾಂತರ;
ಶಾಸಕ ಎಎಸ್ ಪೊನ್ನಣ್ಣ ಅವರಿಗೆ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷರಾದ ಲಿಜೇಶ್ ಅಮ್ಮತ್ತಿ ಅವರು ಅರ್ಜೆಂಟೀನಾ ಫುಟ್ಬಾಲ್ ತಂಡದ ಜೆರ್ಸಿ ಕೊಡುಗೆಯಾಗಿ ನೀಡಿದರು.ದೈಹಿಕ ಶಿಕ್ಷಕ ಅರುಣ್ ಅವರು ಶಾಸಕರಿಗೆ ಅರ್ಜೆಂಟೀನಾ ತಂಡದ ಲೋಗೋ ಇರುವ ಕ್ಯಾಪ್ ಅನ್ನು ನೀಡಿದರು.
ಶಾಸಕ ಎಎಸ್ ಪೊನ್ನಣ್ಣ ಸಹಿ ಮಾಡಿದ ಬಾಲ್ ನೊಂದಿಗೆ ಸಿಗಲಿದೆ ಹತ್ತು ಸಾವಿರ ರೂ ನಗದು ಬಹುಮಾನ:
ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಆಶ್ರಯದಲ್ಲಿ ಅಮ್ಮತ್ತಿ ಭಾಗದಲ್ಲಿ ಫಿಫಾ ವರ್ಲ್ ಕಪ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವ ತಂಡವನ್ನು ಸರಿಯಾಗಿ ಪ್ರೆಡಿಕ್ಷನ್ ಮಾಡುವ ಫುಟ್ಬಾಲ್ ಅಭಿಮಾನಿಗಳಿಗೆ ಶಾಸಕ ಎಎಸ್ ಪೊನ್ನಣ್ಣ ಅವರು ಸಹಿ ಮಾಡಿರುವ ಬಾಲ್ ಅನ್ನು ನೀಡಲು ತೀರ್ಮಾನಿಸಿದ್ದಾರೆ.ಕಾರ್ಯಕ್ರಮದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರು ಫುಟ್ಬಾಲ್ ಗೆ ಸಹಿ ಮಾಡಿದರು.ಇದೇ ಸಂದರ್ಭದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರು ಪ್ರೆಡಿಕ್ಷನ್ ನಲ್ಲಿ ಗೆಲ್ಲುವ ಆಟಗಾರರನಿಗೆ ಹತ್ತು ಸಾವಿರ ಬೆಲೆ ಬಾಳುವ ಸಂಪೂರ್ಣ ಫುಟ್ಬಾಲ್ ಕಿಟ್ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ ನಿರೂಪಿಸಿ,ದೈಹಿಕ ಶಿಕ್ಷಕ ಅರುಣ್ ಅವರು ಸ್ವಾಗತಿಸಿದರು.ಈ ಸಂದರ್ಭದಲ್ಲಿ
ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಜಾನ್ಸನ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಅಪ್ರು ರವೀಂದ್ರ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಲಿಜೇಶ್, ಸಮಾಜ ಸೇವಕರಾದ ಚೊಕಂಡ ಸಂಜು ಸುಬ್ಬಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಂಸ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಪದಾಧಿಕಾರಿಗಳು,ಸದಸ್ಯರು ಇದ್ದರು.

