Kodagu

ಅಮ್ಮತ್ತಿಯ ಗುಡ್ ಶೆಫರ್ಡ್ ಕಾಲೇಜಿನಲ್ಲಿ ಫಿಫಾ ವಿಶ್ವಕಪ್ ಕ್ರೇಜ್

admincoorgdaily

ಅಮ್ಮತ್ತಿಯ ಗುಡ್ ಶೆಫರ್ಡ್ ಕಾಲೇಜಿನಲ್ಲಿ ಫಿಫಾ ವಿಶ್ವಕಪ್ ಕ್ರೇಜ್

ಸಿದ್ದಾಪುರ :-ವಿಶ್ವ ಕಪ್ ಫಿಫಾ ಕಾಲ್ಚೆಂಡು ಪಂದ್ಯಾವಳಿಗೆ ಚಾಲನೆ ದೊರೆತಿದ್ದು ಭಾರತದಲ್ಲಿ , ವಿಶೇಷವಾಗಿ ದಕ್ಷಿಣ ಭಾರತದಲ್ಲಿ ವಿವಿಧ ತಂಡಗಳಿಗೆ ವ್ಯಾಪಕ ಅಭಿಮಾನ ವ್ಯಕ್ತವಾಗುತ್ತಿದೆ.

ವಿಶೇಷವಾಗಿ ಕೊಡಗಿನಲ್ಲಿ ಬಹುತೇಕ ಎಲ್ಲಾ ತಂಡಗಳಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದು ತಮ್ಮ ತಮ್ಮ ತಂಡಗಳಿಗೆ ಶುಭ ಹಾರೈಸುವ ಬ್ಯಾನರ್ಗಳು ವಿಶ್ವಕಪ್ ಫೀಫಾ ಪಂದ್ಯಾವಳಿಗೆ ಇನ್ನಷ್ಟು ರಂಗು ತಂದಿದೆ. ಕೊಡಗಿನ ಅಮ್ಮತ್ತೀಯ ಗುಡ್ ಶಫರ್ಡ್ ಪಿಯು ಕಾಲೇಜಿನಲ್ಲೂ ಅಭಿಮಾನಿ ವಿದ್ಯಾರ್ಥಿಗಳು ತಮ್ಮ ತಮ್ಮ ಅಭಿಮಾನಿ ತಂಡಗಳಿಗೆ ಬೇಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದರು.

ಪ್ರತ್ಯೇಕವಾಗಿ ಅತಿ ಹೆಚ್ಚು ಕಪ್ಪುಗಳನ್ನು ಗೆದ್ದಿರುವ ಬ್ರೆಜಿಲ್, ಕಳೆದ ಬಾರಿ ಚಾಂಪಿಯನ್ಶಿಪ್ ಕಿರೀಟವನ್ನು ಮುಟ್ಟಿಗೇರಿಸಿಕೊಂಡ ಹಾಲಿ ಚಾಂಪಿಯನ್ ಗಳಾದ ಅರ್ಜೆಂಟೀನಾ ಹಾಗೂ ಆಕರ್ಷಕ ಶೈಲಿಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಪ್ರತಿನಿಧಿಸುವ ಪೋರ್ಚುಗಲ್ ತಂಡದ ಅಭಿಮಾನಿ ವಿದ್ಯಾರ್ಥಿಗಳು ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದರು. ತಂಡದ ಆಟಗಾರರನ್ನು ಒಳಗೊಂಡ ಬ್ಯಾನರ್ ಗಳನ್ನು ವಿಶೇಷ ರೀತಿಯಲ್ಲಿ ತಯಾರಿಸಿ ಲೋಕಾರ್ಪಣೆಗೆದರು.

ಇದೇ ಸಂದರ್ಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಡ್ ಶಫರ್ಡ್ ಸಂಸ್ಥೆಯ ಪ್ರಾಂಶುಪಾಲರಾದ ಸಿಸ್ಟರ್ ಪುಷ್ಪಲತಾ ಅವರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವ ಯುವಕರಿಗೆ ಇಂತಹ ಕ್ರೀಡಾಭಿಮಾನಿತ್ವ ಅಂತಹ ಕೆಡುಕುಗಳಿಂದ ದೂರವಿರಲು ಸಹಾಯಮಾಡುತ್ತದೆ, ಆದಷ್ಟು ಬೇಗ ಭಾರತೀಯ ತಂಡವು ಸಹ ವಿಶ್ವ ಕಪ್ ನಲ್ಲಿ ಆಡಲಿ ಎಂದು ಹಾರೈಸಿದರು. ಸಭಾ ಕಾರ್ಯಕ್ರಮದ ನಂತರ ಅಭಿಮಾನಿಗಳ ವಿಶೇಷ ಜಾಥ ಹಾಗೂ ಅಭಿಮಾನಿಗಳ ನಡುವಿನ ಫುಟ್ಬಾಲ್ ಪಂದ್ಯಾವಳಿ ನಡೆಯಿತು.

ಅರ್ಜೆಂಟಿನ ತಂಡವು ಗೆಲುವು ಸಾಧಿಸಿದರೆ ದ್ವಿತೀಯ ಸ್ಥಾನವನ್ನು ಬ್ರೆಜಿಲ್ ತಂಡ ಪಡೆದುಕೊಂಡಿತ್ತು. ಇದೇ ಸಂದರ್ಭ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಮರಿಯಾ ತೆರೇಸಾ , ಸಿಸ್ಟರ್ ಲಿನ್ಸಿ , ಪ್ರಾಧ್ಯಾಪಕರಾದ ಲಿನ್ಸಿ , ಪ್ರಿಯಾಂಕ ಪೀಟರ್, ನೀತಿ ಹಾಗೂ ದೈಹಿಕ ತರಬೇತಿದಾರರಾದ ನಿತಿನ್ ರವರು ಹಾಜರಿದ್ದರು. ಅಮ್ಮತ್ತಿ ಪಟ್ಟಣದಲ್ಲಿ ಫ್ಲೆಕ್ಸ್ ಬಂಟಿಂಗ್ಸ್ ಬ್ಯಾನರ್ ಗಳಿಂದ ಕಂಗೊಳಿಸುತ್ತಿದ್ದು ವಿವಿಧ ತಂಡಗಳಿಗೆ ಅಭಿನಂದಿಸಿ ಶುಭ ಕೋರಿದ್ದಾರೆ.