FIFA WORLD CUP-2026 ⚽

ಸಿದ್ದಾಪುರದಲ್ಲಿ ಕ್ರೀಡಾಭಿಮಾನಿಗಳ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ಉತ್ಸವ

admincoorgdaily

ಸಿದ್ದಾಪುರದಲ್ಲಿ ಕ್ರೀಡಾಭಿಮಾನಿಗಳ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ಉತ್ಸವ

ಸಿದ್ದಾಪುರ:ವಿಶ್ವ ಕಪ್ ಕಾಲ್ಚೆಂಡು ಪಂದ್ಯಾವಳಿಗೆ ಭಾರತದ ತಂಡ ಇಲ್ಲದಿದ್ದರೂ ದಕ್ಷಿಣ ಭಾರತದಲ್ಲಿ ವಿವಿಧ ತಂಡಗಳಿಗೆ ವ್ಯಾಪಕ ಅಭಿಮಾನಿ ಬಳಗವಿದ್ದು, ನೆಚ್ಚಿನ ತಂಡದ ಆಟಗಾರರಿಗೆ ಶುಭಕೋರುವ ಮೂಲಕ ಪ್ಲೆಕ್ಸ್ ,ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದರ ಮೂಲಕ ಪಟಾಕಿಗಳನ್ನು ಸಿಡಿಸಿ ಸಂಭ್ರಮ ವ್ಯಕ್ತವಾಗುತ್ತಿದೆ.

ವಿಶೇಷವಾಗಿ ಕೊಡಗಿನಲ್ಲಿ ಬಹುತೇಕ ಎಲ್ಲಾ ತಂಡಗಳಿಗೆ ವಿಶ್ವಕಪ್ ಫೀಫಾ ಪಂದ್ಯಾವಳಿಗೆ ಇನ್ನಷ್ಟು ರಂಗು ತಂದಿದೆ. ಕೊಡಗಿನ ಸಿದ್ದಾಪುರದಲ್ಲಿ ಸಿಟಿ ಬಾಯ್ಸ್ ಹಾಗೂ ಫ್ರೆಂಡ್ಸ್ ಎಫ್ ಸಿ ಸಂಘದ ಅಭಿಮಾನಿ ಕ್ರೀಡಾಪಟುಗಳು ಸಿದ್ದಾಪುರ ಪಟ್ಟಣದಲ್ಲಿ ವಿಶಿಷ್ಟವಾಗಿ ಕಟೌಟ್ ಬ್ಯಾನರ್ಗಳನ್ನ ಅಳವಡಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭ ಮುಸ್ತಫ, ಅಪ್ಸಲ್, ಸಿರಾಜ್, ಆಸಿಫ್ ಅಲಿ, ಸುಹೇಬ್ , ಶಾಹುಲ್, ಉಮ್ಮರ್, ರಾಜಿಕ್, ಮುಕ್ತಾರ್ ಸೇರಿದಂತೆ ಇತರ ಕ್ರೀಡಾಪಟುಗಳು ಹಾಜರಿದ್ದರು.