ವಿರಾಜಪೇಟೆಯಲ್ಲಿ ಫಿಫಾ ವಿಶ್ವ ಕಪ್ ಪುಟ್ಬಾಲ್ ತಂಡಗಳ ಫ್ಲೆಕ್ಸ್ ತೆರೆವು: ಪುಟ್ಬಾಲ್ ಅಭಿಮಾನಿಗಳಿಂದ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಆಕ್ರೋಶ

ವಿರಾಜಪೇಟೆಯಲ್ಲಿ ಫಿಫಾ ವಿಶ್ವ ಕಪ್ ಪುಟ್ಬಾಲ್ ತಂಡಗಳ ಫ್ಲೆಕ್ಸ್ ತೆರೆವು:  ಪುಟ್ಬಾಲ್ ಅಭಿಮಾನಿಗಳಿಂದ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಆಕ್ರೋಶ
ಕ್ರೀಡಾ ಪ್ರೇಮಿಗಳ ಆಕ್ರೋಶ

ವಿರಾಜಪೇಟೆ:ಕಳೆದ ನಾಲ್ಕು ದಿನಗಳ ಹಿಂದೆ ವಿರಾಜಪೇಟೆ ಕೂರ್ಗ್ ಮಾಸ್ಟರ್ ಪುಟ್ಬಾಲ್ ಕ್ಲಬ್ ನ ಸದಸ್ಯರು ವಿರಾಜಪೇಟೆ ನಗರದ ಕೆಲವು ಆಯ್ದ ಭಾಗಗಳಲ್ಲಿ ವಿಶ್ವಕಪ್ ಫುಟ್ಬಾಲ್ ಆಟಗಾರರ ಮತ್ತು ಸ್ಥಳೀಯ ಪುಟ್ಬಾಲ್ ಆಟಗಾರರ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು.

ನಿನ್ನೆ ದಿನ ಸ್ಥಳೀಯ ನಿವಾಸಿ ಸೋಮಣ್ಣ ಎಂಬಾತ ಈ ಫ್ಲೆಕ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಗರದಲ್ಲಿ ಈ ರೀತಿಯ ಫ್ಲೆಕ್ಸ್ ಅಳವಡಿಸಿದರೆ ನಗರದ ಚಂದಾ ಹಾಳಾಗುತ್ತದೆ ಎಂದು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದು, ಇದನ್ನು ಗಮನಿಸಿದ ವಿರಾಜಪೇಟೆ ಮುಖ್ಯಾಧಿಕಾರಿ ನಾಚಪ್ಪ ಅವರು ಪುರಸಭೆ ನೌಕರರಿಂದ ಫ್ಲೆಕ್ಸ್ ಅನ್ನು ತೆರವು ಮಾಡಲಾಗಿತ್ತು ಫ್ಲೆಕ್ಸ್ ಆಳವಡಿಸಿದ್ದ ಪುಟ್ಬಾಲ್ ಕ್ಲಬ್ ನ ಸದಸ್ಯರು ಇಂದು ಪುರಸಭೆ ಕಚೇರಿ ಗೆ ಆಗಮಿಸಿ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

 ಹಿರಿಯ ಪುಟ್ಬಾಲ್ ಆಟಗಾರ ಸಿ.ಕೆ.ಪೃಥ್ವಿನಾಥ್ ಮಾತನಾಡಿ ಪುರಸಭೆ ಸಾಮಾನ್ಯ ಸಭೆ ಯಲ್ಲಿ ವಿರಾಜಪೇಟೆ ನಗರದಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ವಿವಿಧ ಕ್ರೀಡೆ ಗಳಿಗೆ ಸಂಭಂದಿಸಿದಂತೆ ಫ್ಲೆಕ್ಸ್ ಅಳವಡಿಸಲು ರಿಯಾಯಿತಿ ನೀಡಲು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದ್ದರಿಂದ ಫ್ಲೆಕ್ಸ್ ಆಳವಡಿಸಲು ಪುರಸಭೆಯಿಂದ ಅನುಮತಿ ಪಡೆದಿರಲಿಲ್ಲ.ಅನುಮತಿ ಬಯಸಿದರೆ ಅನುಮತಿ ಪತ್ರ ಪಡೆಯುತ್ತಿದ್ದೆವು.

ಏಕಾಏಕಿ ನಮ್ಮ ಗಮನಕ್ಕೆ ತಾರದೆ ಫ್ಲೆಕ್ಸ್ ತೆರವು ಗೊಳಿಸಿದ್ದು ಸರಿಯಲ್ಲ ಇದು ಕ್ರೀಡಾ ಪ್ರೇಮಿಗಳಿಗೆ ಮಾಡಿದ ಅವಮಾನ ಎಂದು ತಿಳಿಸಿದರು.ಅಲ್ಲದೆ ಈ ರೀತಿಯ ವಿಡಿಯೋ ಮಾಡಿದ ಸೋಮಣ್ಣ ವಿರುದ್ಧ ವಿರಾಜಪೇಟೆ ನಗರ ಠಾಣೆ ಯಲ್ಲಿ ಮೊಕದ್ದಮೆ ಹೂಡಿದರು. ಈ ಸಂದರ್ಭದಲ್ಲಿ ಮಾಸ್ಟರ್ ಕ್ಲಬ್ ಅಧ್ಯಕ್ಷರಾದ ಭಾಸ್ಕರ್, ಗಣೇಶ್, ಅಬ್ದುಲ್ ಜಲೀಲ್,ಮರ್ವಿನ್ ಲೊಬೊ,ರಜನಿಕಾಂತ್, ಹರೀಶ್, ರಾಮಕೃಷ್ಣ, ಜನು,ಜಾನ್ಸನ್,ಮೋಹನ್ ಜಾಕಿರ್,ಜಿಮ್ಮಿ ಸೇರಿದಂತೆ ಹಲವಾರು ಪುಟ್ಬಾಲ್ ಆಟಗಾರರು ಭಾಗವಹಿಸಿದ್ದರು.