ಸ್ನೇಹಿತೆಯ ಖಾಸಗಿ ವಿಡಿಯೋ ಇಟ್ಟುಕೊಂಡು ₹2 ಕೋಟಿಗೆ ಬ್ಲ್ಯಾಕ್‌ಮೇಲ್: ‘ಬ್ಯೂಟಿ ಕ್ವೀನ್’ ನಟಿಯ ವಿರುದ್ಧ ಎಫ್‌ಐಆರ್!

Oct 26, 2025 - 12:28
 0  1.5k
ಸ್ನೇಹಿತೆಯ ಖಾಸಗಿ ವಿಡಿಯೋ ಇಟ್ಟುಕೊಂಡು ₹2 ಕೋಟಿಗೆ ಬ್ಲ್ಯಾಕ್‌ಮೇಲ್: ‘ಬ್ಯೂಟಿ ಕ್ವೀನ್’ ನಟಿಯ ವಿರುದ್ಧ ಎಫ್‌ಐಆರ್!
Photo credit: Asaint news

ಬೆಂಗಳೂರು, ಅ. 25: ‘ಮಿಸೆಸ್ ಇಂಡಿಯಾ ಬ್ಯೂಟಿಫುಲ್ ಸ್ಟೈಲ್’ ಪ್ರಶಸ್ತಿ ವಿಜೇತೆ ಹಾಗೂ ನಟಿ ಆಶಾ ಜೋಯಿಸ್ ವಿರುದ್ಧ 61 ವರ್ಷದ ಮಹಿಳೆಯೊಬ್ಬರ ಖಾಸಗಿ ವಿಡಿಯೋ ಮತ್ತು ಡೇಟಾ ಕದ್ದುಕೊಂಡು, ₹2 ಕೋಟಿ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 ಆಶಾ ಜೋಯಿಸ್ ಅವರು ಕನ್ನಡ ಚಿತ್ರರಂಗ ಮತ್ತು ಸೀರಿಯಲ್‌ಗಳಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಬ್ಯೂಟಿಫುಲ್ ಸ್ಟೈಲ್, ಬ್ಯೂಟಿಫುಲ್ ಹೇರ್ ಸೇರಿದಂತೆ ಅನೇಕ ಕಿರೀಟಗಳನ್ನು ಮುಡಿಗೇರಿಸಿಕೊಂಡು, 2016ರಲ್ಲಿ ‘ಮಿಸ್ ಇಂಡಿಯಾ ಪ್ಲಾನೆಟ್’ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.

 ಆತ್ಮವಿಶ್ವಾಸ ಹಾಗೂ ಪಾಸಿಟಿವ್ ಚಿಂತನೆಯೇ ಜೀವನದ ಮಂತ್ರ ಎಂದು ಹೇಳುವ ಆಶಾ, ಶೃಂಗೇರಿ ಶಾರದಾ ಪೀಠದ ಜೋಯಿಸ್ ಕುಟುಂಬದವರಾಗಿದ್ದಾರೆ. ಆದರೆ ಈಗ ಅವರ ವಿರುದ್ಧ ಬ್ಲಾಕ್ ಮೇಲ್ ಆರೋಪ ಕೇಳಿ ಬಂದಿದೆ.

ಪಾರ್ವತಿ ಎಂಬ 61 ವರ್ಷದ ಮಹಿಳೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಕೆಲವು ವರ್ಷಗಳ ಹಿಂದೆ ಆಶಾ ಅವರೊಂದಿಗೆ ಅವರ ಪರಿಚಯ ಬೆಳೆದಿತ್ತು. ಬಳಿಕ ಪಾರ್ವತಿ ತಮ್ಮ ಕಂಪೆನಿಯ ಮಾಲೀಕರನ್ನು ಮದುವೆಯಾಗಿದ್ದರು. ಅವರು ಶ್ರೀಮಂತರು ಎಂಬ ಮಾಹಿತಿ ತಿಳಿದ ಆಶಾ, ಪಾರ್ವತಿಯೊಂದಿಗೆ ಆತ್ಮೀಯತೆ ಬೆಳೆಸಿ, ಅವರ ಫೋನ್‌ನಿಂದ ಖಾಸಗಿ ವಿಡಿಯೋ, ಫೋಟೋ ಮತ್ತು ವಾಯ್ಸ್ ರೆಕಾರ್ಡ್ ಪಡೆದುಕೊಂಡಿದ್ದರು ಎನ್ನಲಾಗಿದೆ.

ನಂತರ ಈ ಖಾಸಗಿ ಡೇಟಾವನ್ನು ಬಳಸಿಕೊಂಡು ಪಾರ್ವತಿ ಅವರಿಂದ ₹2 ಕೋಟಿ ರೂಪಾಯಿ ಕೊಡುವಂತೆ ಬ್ಲಾಕ್ ಮೇಲ್ ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಪಾರ್ವತಿ ಅವರು ನಿರಾಕರಿಸಿದ ಬಳಿಕ, ಆಶಾ ಆ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಪಾರ್ವತಿಯ ಪರಿಚಯಸ್ಥರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

 ಪಾರ್ವತಿ ಅವರ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 2
Wow Wow 0