Kodagu

ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ವಿಫಲ:ಆಗಸ್ಟ್ 31ರಂದು ಸಿದ್ದಾಪುರ ಬಂದ್

admincoorgdaily

ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ವಿಫಲ:ಆಗಸ್ಟ್  31ರಂದು ಸಿದ್ದಾಪುರ ಬಂದ್

ಸಿದ್ದಾಪುರ :- ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಹಾಗೂ ಸರಕಾರ ವಿಫಲವಾಗಿದ್ದು ಕಳೆದ 8ತಿಂಗಳ ಅವಧಿಯಲ್ಲಿ 8 ಸಾವಾಗಿದ್ದು ಅರಣ್ಯ ಇಲಾಖೆ ಮೃತರ ಕುಟುಂಬಕ್ಕೆಹಣ ಕೊಟ್ಟು ಬಾಯಿ ಮುಚ್ಚಿಸುತಿದೆ ಈ ನಿಟ್ಟಿನಲ್ಲಿ ಆ. 31ರಂದು ಸಿದ್ದಾಪುರ ಬಂದ್ ನಡೆಸಿ ಪ್ರತಿಭಟನೆ ನಡೆಸಲು ಸಂಘ ಸಂಸ್ಥೆಗಳು ತೀರ್ಮಾನಿಸಿವೆ.

ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸಿದ ರೈತ, ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸರಕಾರ ಮತ್ತು ಅರಣ್ಯ ಇಲಾಖೆ ಬೇಜವಾಬ್ದಾರಿತನದ ಅವಲೋಕನ ನಡೆಸಿದರು.

ರೈತ ಸಂಘದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಮಾತನಾಡಿ, ಕೊಡಗಿನಲ್ಲಿ ಕಳೆದೊಂದು ವರ್ಷದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು ಉನ್ನತ ಅಧಿಕಾರಿಗಳು ಸ್ಪಂದನೆ ಶೂನ್ಯವಾಗಿದೆ.

ನಮ್ಮ ಉಳಿವಿಗಾಗಿ ರಾಜಕೀಯ ರಹಿತ ಹೋರಾಟ ಅವಷ್ಯಕವಾಗಿದೆ. ಅಧಿಕಾರಿಗಳೇ ನೀಡಿರುವ ಅಂಕಿಅಂಶದ ಪ್ರಕಾರ ಜಿಲ್ಲೆಯಲ್ಲಿ 240ಆನೆಗಳು ಕಾಫಿತೋಟದಲ್ಲಿ ಬೀಡು ಬಿಟ್ಟಿದೆ  ಇಷ್ಟು ಮಾಹಿತಿ ಇದ್ದರೂ ಶಾಶ್ವತ ಕ್ರಮ ಕೖಗೊಳ್ಳುತ್ತಿಲ್ಲ ಎಂದ ಅವರು ಪ್ರತಿನಿತ್ಯ ಆನೆ ಹಾವಳಿ ನಡೆಯುತ್ತಿರುವ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಉಪವಲಯ ಅರಣ್ಯ ಠಾಣೆ ಸ್ಥಾಪನೆ ಮಾಡಬೇಕು ಎಂದು ಸಭೆಯ ಗಮನ ಸೆಳೆದರು.

ಅರಣ್ಯ ಇಲಾಖೆ ಆರ್.ಆರವ್. ಟಿ ಸಿಬ್ಬಂಧಿ ಹೆಸರಿನಲ್ಲಿ ಗುತ್ತಿಗೆ ಆಧಾರದಲ್ಲಿ ಯಾವುದೇ ಸೂಕ್ತ ತರಬೇತಿ ನೀಡದೆ ಯುವಕರ ತಂಡದೊಂದಿಗೆ ಆನೆ ಓಡಿಸುವ ನಾಟಕ ಮಾಡುತ್ತಾ ಕೋಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದೆ ಎಂದು ಕಾರ್ಮಿಕ ಮುಖಂಡ ಮಹದೇವ್ ಆರೋಪಿಸಿದರು.

ಹಾಡು ಹಗಲಿನಲ್ಲಿ ಕಾಡಾನೆಗಳು ರಸ್ತೆಗಳಲ್ಲಿ ಗೋಚರಿಸುವುದರಿಂದ ಆಟೋಚಾಲಕರು ಸವಾರಿ ಹೋಗುವುದೇ ಕಷ್ಟವಾಗಿದೆ.

ರೖತರು ಕಾರ್ಮಿಕರು, ಹಾಗೂ ಸಾರ್ವಜನಿಕರ ಪ್ರಾಣಾ ಉಳಿವಿಗಾಗಿ ಬೃಹತ್ ಹೋರಾಟದ ಅಗತ್ಯ ಇದೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹೋರಾಟ ಮುಂದುವರಿಸಬೇಕು ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್ಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರೖತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ ಈ ಗಂಭೀರ ಸಮಸ್ಯೆಯ ವಿರುದ್ಧ ಸರಕಾರ ಮತ್ತು ಇಲಾಖೆಯಲ್ಲಿ ಒತ್ತಡ ಹೇರಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆ. 31ರಂದು ಸಿದ್ದಾಪುರ, ನೆಲ್ಲಿಹುದಿಕೇರಿ, ಪಾಲಿಬೆಟ್ಟ, ಮಾಲ್ದಾರೆ ಅಮ್ಮತ್ತಿ ಭಾಗಗಳ ಬೆಳಿಗ್ಗೆ 10ರಿಂದ ಸಂಜೆ 3ಗಂಟೆಯವರೆಗೆ ಬಂದ್ ಆಚರಿಸುವ ಮೂಲಕ ಪ್ರತಿಭಟ್ಟಿಸಲಾಗುವುದು ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸುವಂತೆ ಮನವಿ ಮಾಡಿದರು.

ಕೊಡಗಿನಲ್ಲಿ ಒಂದು ವರ್ಷದ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು ಉನ್ನತ ಅಧಿಕಾರಿ (ಸಿ.ಸಿ. ಎಫ್) ಗಳು ಸ್ಪಂದನೆ ಶೂನ್ಯವಾಗಿದೆ.ಬೇರೆ ಅಧಿಕಾರಿಯ ನೇಮಕವಾಗಬೇಕು ತೋಟದಲ್ಲಿ ಬೀಡು ಬಿಟ್ಟಿರುವ ಸಂಪೂರ್ಣ ಆನೆಗಳನ್ನು ಕಾಡಿಗಟ್ಟುವುದು.

ವೈಜ್ಞಾನಿಕ ಪದ್ದತಿಯಲ್ಲಿ ಆನೆಗಳು ಮರಳಿ ನಾಡಿಗೆ ಬಾರದಂತೆ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡ ಭರತ್ ತಿಳಿಸಿದರು.

ಸಭೆಯಲ್ಲಿ ಛೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ, ಎಐಟಿಯುಸಿ ಉಪಾಧ್ಯಕ್ಷ ಮಣಿ,ಸದಸ್ಯರಾದ ಕುಮಾರ್, ಸೀತಾರಾಮ್, ಸಿಐಟಿಯುನ ರಮೇಶ್, ಎನ್, ಡಿ, ಕುಟ್ಟಪ್ಪನ್, ಎ, ಸಿ, ಸಾಬು, ಸಜೀವನ್, ಸತ್ಯನಾರಾಯಣ, ಕರವೇ ಸಜಿಲ್ ನಾಯರ್ ಆಟೋಚಾಲಕ ಸಂಘಟನೆ ಸದಸ್ಯರು ಹಾಜರಿದ್ದರು.