ಕೊಡಗು ಎಸ್‌ಪಿ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಎಕೌಂಟ್

Jan 11, 2026 - 11:33
 0  603
ಕೊಡಗು ಎಸ್‌ಪಿ ಹೆಸರಿನಲ್ಲಿ ಫೇಕ್ ಫೇಸ್ ಬುಕ್  ಎಕೌಂಟ್

ಮಡಿಕೇರಿ, ಜ. 10: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ರಚಿಸಿದ್ದು, ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು ಎಂದು ಮಡಿಕೇರಿ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕೊಡಗು ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ಬಿಂದುಮಣಿ ಅವರ ಹೆಸರಿನಲ್ಲಿ ಬಿಂದುಮಣಿ ಐಪಿಎಸ್, ಎಸ್‌ಪಿ ಕೊಡಗು ಡಿಸ್ಟ್ರಿಕ್ಟ್ ಎಂದು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಲವರಿಗೆ 'ಫ್ರೆಂಡ್ ರಿಕ್ವೆಸ್ಟ್' ಕಳುಹಿಸಲಾಗಿದೆ. ಖಾತೆ ಪರಿಶೀಲಿಸಿದಾಗ ಲಾಕ್ ಆಗಿರುವುದು ಕಂಡು ಬಂದಿದೆ. ಮತ್ತೆ ಕೆಲವರು 'ಫ್ರೆಂಡ್ ರಿಕ್ವೆಸ್ಟ್' ಗೆ ಒಪ್ಪಿಗೆ ಸೂಚಿಸಿದ್ದಾರೆ.

ಈ ವಿಚಾರ ಮಡಿಕೇರಿ ಪೊಲೀಸರ ಗಮನಕ್ಕೆ ಬಂದಿದ್ದು, ಇದೊಂದು ನಕಲಿ ಫೇಸ್ ಬುಕ್ ಖಾತೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು ಎಂದು ಮನವಿ ಮಾಡಿರುವ ಪೊಲೀಸರು ಅಧಿಕಾರಿಗಳು ಕಿಡಿಗೇಡಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 2
Angry Angry 0
Sad Sad 0
Wow Wow 0