ಪ್ರಸಿದ್ಧ ಮಲಯಾಳಂ ಹಾಸ್ಯನಟ ಕಲಾಭವನ್ ನವಾಸ್ ನಿಧನ

Aug 2, 2025 - 10:18
 0  404
ಪ್ರಸಿದ್ಧ ಮಲಯಾಳಂ ಹಾಸ್ಯನಟ ಕಲಾಭವನ್ ನವಾಸ್ ನಿಧನ
ಕಲಾಭವನ್ ನವಾಸ್

ಕೇರಳ: ಪ್ರಸಿದ್ಧ ಮಲಯಾಳಂ ಹಾಸ್ಯನಟ ಕಲಾಭವನ್ ನವಾಸ್ (51) ಅವರು ಶುಕ್ರವಾರ ಚೊಟ್ಟನಿಕ್ಕರದಲ್ಲಿರುವ ಹೋಟೆಲ್ ಒಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಟ ನವಾಸ್ ಅವರು ತಮ್ಮ ಮುಂದಿನ ʼಪ್ರಕಂಬನಂʼ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಶುಕ್ರವಾರ ಚಿತ್ರೀಕರಣ ಮುಗಿಸಿ ಹೋಟೆಲ್‌ ನಿಂದ ಚೆಕ್‌ಔಟ್ ಮಾಡಬೇಕಿತ್ತು. ಆದರೆ, ಸಮಯಕ್ಕೆ ತಮ್ಮ ಕೋಣೆಯಿಂದ ನಿರ್ಗಮಿಸದ ಕಾರಣ, ರೂಮ್ ಬಾಯ್ ಅವರು ಹೋಗಿ ನೋಡಿದಾಗ ನವಾಸ್ ಅವರು ಪ್ರಜ್ಞೆತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ವೈದ್ಯರು ನವಾಸ್‌ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0