Kodagu

ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಬೀಳ್ಕೊಡುಗೆ

admincoorgdaily

ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ   ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಬೀಳ್ಕೊಡುಗೆ

ಶನಿವಾರಸಂತೆ : ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 31ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಪಿ.ಎಸ್ ಲೀಲಾಕುಮಾರ್ ಇವರನ್ನು ಸಂಘದ ವತಿಯಿಂದ ವಿಜಯ ಯುವಕ ಸಂಘದ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಜೆ ಪ್ರಸನ್ನಕುಮಾರ್,ಉಪಾಧ್ಯಕ್ಷ ಹೊನ್ನಪ್ಪ, ನಿರ್ದೇಶಕರುಗಳಾದ ಸುಂದರೇಶ್,ಎ ಜೆ ವಿಜಯ್, ಹೆಚ್ ಎಸ್ ವೀಣಾ,ಕೆ.ಈ. ಮದುಶಂಕರ್,ಕೆ.ಎಸ್. ಜಗದೀಶ್,ಎನ್. ಎಸ್. ಜಗದೀಶ್ವರ ಸ್ವಾಮಿ,ಯು. ಎನ್. ಕಲಾವತಿ,ಕೆ.ವಿ. ರಾಧಮಣಿ,ಬಿ. ಈ. ಧರ್ಮಪ್ಪ,ಹೆಚ್. ಕೆ. ಮಲ್ಲೇಶ್,ಕೆ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕ ಬಿ.ಜಿ.ಇಂದ್ರೇಶ್, ಹಿರಿಯ ಲೆಕ್ಕಾಧಿಕಾರಿ ಚಂದ್ರಮತಿ,ಪ್ರವೀಣ್, ಪಟ್ಟದ ದೇವಕ್ಕಿ, ಅನಿತಾ ಲೀಲಾಕುಮರ್, ಪವನ್ , ಪಂಚಮಿ,ಪ್ರಮುಖರಾದ ಹೆಚ್ ಟಿ ಕೋಮರಪ್ಪ, ಪ್ರೇಮ್ ನಾಥ್, ಉತ್ತಪ್ಪ, ಮೋಹನ್, ಚಂದ್ರಶೇಖರ್ ಮುಂತಾದವರಿದ್ದರು.