Kodagu

ಆಗಸ್ಟ್ 7 ರಂದು ರೈತ ಸಂಘದಿಂದ ಎಸ್ಪಿ ಕಚೇರಿ ಚಲೋ

admincoorgdaily

ಆಗಸ್ಟ್ 7 ರಂದು ರೈತ ಸಂಘದಿಂದ ಎಸ್ಪಿ ಕಚೇರಿ ಚಲೋ

ಗೋಣಿಕೊಪ್ಪ ; ಬಿಡದಿ ರೈತಪರ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಬಂಧಿಸಿರುವ ಕ್ರಮ ಖಂಡಿಸಿ ಆಗಸ್ಟ್ 7 ರಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಂತರ ಈ ಬಗ್ಗೆ ತಿಳಿಸಿದ ಅವರು, ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದಂತೆ ರೈತರನ್ನು ತಡೆ ಮಾಡಿ ಬಂಧಿಸುವ ಕಾರ್ಯ ನಡೆದಿದೆ. ಇದರಂತೆ ಎಸ್ಪಿ ಕಚೇರಿ ಚಲೋ ಕಾರ್ಯಕ್ರಮದ ಮೂಲಕ ರೈತ ಪರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಪೂರ್ವಭಾವಿ ಸಭೆಯಲ್ಲಿ ಬಸ್ ಮಾಲೀಕರು ಸೇರಿದಂತೆ ಸಾಕಷ್ಟು ಸಂಘ-ಸಂಸ್ಥೆಗಳ ಪ್ರಮುಖರು ಬಂದ್ ನಡೆಸುವ ಪ್ರಯತ್ನಕ್ಕಿಂತ ಮುತ್ತಿಕೆ ಹಾಕುವ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದೆ. ಇದರಂತೆ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ಸಂಘದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಈ ಬಗ್ಗೆ ತಿಳಿಸಿದ ಅವರು, ಸಂಘ- ಸಂಸ್ಥೆ ಪ್ರಮುಖರು, ಪಕ್ಷಗಳ ಮುಖಂಡರು ಸೇರಿದಂತೆ ಪ್ರಮುಖರನ್ನು ಸಭೆಗೆ ಆಹ್ವಾನಿಸಿ ಬಂದ್ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗಿತ್ತು. ಇದರಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಪೊಲೀಸ್ ವರಿಷ್ಠಾಧಿಕಾರಿ ರೈತಪರವಾಗಿ ನಿಲ್ಲಬೇಕಿತ್ತು. ಆದರೆ ಜನಪ್ರತಿನಿಧಿಗಳ ಕೈಗೊಂಬೆಯಾಗಿ ನಿಂತಿದ್ದಾರೆ ಎಂದು ಆರೋಪಿಸಿದರು. ಜನಪರವಾಗಿ ಪೊಲೀಸ್ ಇಲಾಕೆ ತೊಡಗಿಕೊಂಡಿಲ್ಲ ಎಂದು ತಿಳಿಸಿದರು.

 ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ರಾಜಕೀಯ ಪಕ್ಷ ಮತ್ತು ರಾಜಕೀಯ ನಾಯಕರುಗಳು ಬೆಂಬಲ ನೀಡಿಲ್ಲ. ಹತ್ತು ಹಲವು ಮುಖಂಡರಿದ್ದರೂ, ರೈತಪರವಾಗಿ ನಿಂತಿಲ್ಲ ಎಂದರು. ಸಂಘದ ಹೋರಾಟ ರೈತಪರವಾಗಿದೆ. ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಚೇನಂಡ ಪೂಣಚ್ಚ ಇದ್ದರು.