ಫತ್ಹೇ ಮುಬಾರಕ್;ನಾಳೆ ಕೊಡಗು ಜಿಲ್ಲೆಯಾದ್ಯಂತ ಮದರಸ ಪ್ರಾರಂಭೋತ್ಸವ
admincoorgdaily

ವರದಿ :ಝಕರಿಯ ನಾಪೋಕ್ಲು
ಮಡಿಕೇರಿ :ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೊಡಗು ಜಿಲ್ಲಾ ವ್ಯಾಪ್ತಿಯ 86 ಮದ್ರಸಾಗಳಲ್ಲಿ ರಂಝಾನ್ ಅವಧಿಯ ಬಳಿಕ ಮಾರ್ಚ್ 29ರ ಆದಿತ್ಯವಾರ ಮದ್ರಸಾ ಪುನರಾರಂಭಗೊಳ್ಳಲಿದೆ.
'ಅಕ್ಷರ ಲೋಕಕ್ಕೆ ಮೊದಲ ಹೆಜ್ಜೆ' ಎಂಬ ಧ್ಯೇಯವಾಕ್ಯದೊಂದಿಗೆ "ಫತ್ಹೇ ಮುಬಾರಕ್" ಕಾರ್ಯಕ್ರಮದೊಂದಿಗೆ ಮದ್ರಸಾ ಪುನರಾರಂಭಗೊಳ್ಳಲಿದೆ.
ಎಸ್ ಜೆಎಂ ಕೊಡಗು ಜಿಲ್ಲೆಯ ಅಧೀನದ 6 ರೇಂಜ್ ಗಳಲ್ಲಿ 86 ಮದ್ರಸಾಗಳಿದ್ದು 299 ಮುಅಲ್ಲಿಮರು ಸೇವೆಗೈಯುತ್ತಿದ್ದಾರೆ. 7,500ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ.
ಫತ್ಹೇ ಮುಬಾರಕ್ ಜಿಲ್ಲೆಯ ಎಲ್ಲಾ ಮದ್ರಸಾಗಳಲ್ಲಿಯೂ ಅದ್ಧೂರಿಯಾಗಿ ನಡೆಯಲಿದ್ದು ಮದ್ರಸಾ ಮುಅಲ್ಲಿಮರು, ಆಡಳಿತ ಸಮಿತಿ ಪದಾಧಿಕಾರಿಗಳು,ಊರಿನ ಪ್ರಮುಖರು,ಉಲಮಾ-ಉಮರಾ ನಾಯಕರುಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಎಸ್ ಜೆಎಂ ಜಿಲ್ಲಾಧ್ಯಕ್ಷರಾದ ಅಬುಲ್ಲಾ ಸಖಾಫಿ ಕೊಳಕೇರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಅಮ್ಜದಿ ಬಲಮುರಿ, ಹಾಗೂ ಕೋಶಾಧಿಕಾರಿ ಅಶ್ರಫ್ ಸಖಾಫಿ ಎಮ್ಮೆಮಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.