Kodagu

ಮೂರ್ನಾಡುವಿನಲ್ಲಿ ಮಗುವನ್ನೇ ತಂದೆ ಕಿಡ್ನಾಪ್ ಮಾಡಿದ ಪ್ರಕರಣ:ಮಗುವನ್ನು ಸುರಕ್ಷಿತವಾಗಿ ಪತ್ತೆಹಚ್ಚಿದ ಪೊಲೀಸರು

admincoorgdaily

ಮೂರ್ನಾಡುವಿನಲ್ಲಿ ಮಗುವನ್ನೇ ತಂದೆ ಕಿಡ್ನಾಪ್ ಮಾಡಿದ ಪ್ರಕರಣ:ಮಗುವನ್ನು ಸುರಕ್ಷಿತವಾಗಿ ಪತ್ತೆಹಚ್ಚಿದ ಪೊಲೀಸರು

ಮಡಿಕೇರಿ, ಜೂ. 21: ತಂದೆ-ಮಗು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಗುವನ್ನು ಪತ್ತೆಹಚ್ಚಿ ತಾಯಿಗೆ ಹಸ್ತಾಂತರಿಸಿದ್ದಾರೆ.

ಮೂರ್ನಾಡಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಭವ್ಯ ಹಾಗೂ ಪತಿ ಜಿಮ್ಮಿ ನಡುವೆ ವೈಮನಸ್ಯದಿಂದಾಗಿ ಬೇರೆ ಬೇರೆ ವಾಸವಾಗಿದ್ದರು. ಪುಟ್ಟ ಮಗು ತಾಯಿಯೊಂದಿಗೆ ವಾಸವಾಗಿದ್ದು, ಪತಿ ಮಕ್ಕಳ ಕಲ್ಯಾಣ ಸಮಿತಿಯ ಅನುಮತಿಯೊಂದಿಗೆ ಮಗುವನ್ನು ಭೇಟಿಯಾಗಲು ಬಂದಿದ್ದರು.

ಜೂ. 10ರಂದು ಮಗುವನ್ನು ಕಾರಿನಲ್ಲಿ ಕರೆದುಕೊಂಡು ಹೋದ ಬಳಿಕ ತಂದೆ ನಾಪತ್ತೆಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮಗುವನ್ನು ಪತ್ತೆಹಚ್ಚಿದ್ದು, ತಾಯಿಗೆ ಒಪ್ಪಿಸಿದ್ದಾರೆ.