Kodagu

ಕಂಡಕರೆ ಗ್ರಾಮದ ಫಾತಿಮತ್ ಶಮ್ನಾಳಿಗೆ ವಿಜ್ಞಾನ ವಿಭಾಗದಲ್ಲಿ 581 ಅಂಕ

admincoorgdaily

Shamna

ಚೆಟ್ಟಳ್ಳಿ:ಕಂಡಕರೆ ಗ್ರಾಮದ ಫಾತಿಮತ್ ಶಮ್ನಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 581 ಅಂಕಗಳನ್ನು ಪಡೆದು ಶೇಕಡಾ 96% ರಷ್ಟು ಅಂಕಗಳನ್ನು ಉತ್ತೀರ್ಣರಾಗಿದ್ದಾಳೆ.

ಕುಶಾಲನಗರದ ಸ್ವಾಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಮ್ನಾ ಕನ್ನಡದಲ್ಲಿ 98, ಇಂಗ್ಲೀಷ್‌ 95,ಭೌತಶಾಸ್ತ್ರದಲ್ಲಿ 98,ರಸಾಯನಶಾಸ್ತ್ರ 96,ಗಣಿತ ‌96 ಹಾಗೂ ಕಂಪ್ಯೂಟರ್ ಸೈನ್ಸ್ ನಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.

ವಿವೇಕಾನಂದ ಕಾಲೇಜಿಗೆ ತೃತೀಯ ಸ್ಥಾನ‌ ಪಡೆದಿರುವ ಶಮ್ನಾ ಕಂಡಕರೆ ನಿವಾಸಿ ಸಿ.ಎಮ್ ನೌಷಾದ್ ಹಾಗೂ ಜರೀನಾ ದಂಪತಿಯ ಪುತ್ರಿಯಾಗಿದ್ದಾಳೆ.ಈ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಿದ್ದಾಪುರ ಇಕ್ರಾ ಪಬ್ಲಿಕ್ ಶಾಲೆಗೆ ಫಾತಿಮತ್ ಶಮ್ನಾ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಳು.