ಕಾಫಿ ತೋಟದ ಮಧ್ಯೆ ಹೆಣ್ಣಾನೆ ಸಾವು:ತಾಯಿಯನ್ನು ಕಳೆದುಕೊಂಡು ಮರಿ ಆನೆ ಚೀರಾಟ

Jul 26, 2026 - 10:24
 0  442
ಕಾಫಿ ತೋಟದ ಮಧ್ಯೆ ಹೆಣ್ಣಾನೆ ಸಾವು:ತಾಯಿಯನ್ನು ಕಳೆದುಕೊಂಡು ಮರಿ ಆನೆ ಚೀರಾಟ

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಆನಂದಪುರ ಸಮೀಪದ ಕೌರಿಕಾಡು ಎಸ್ಟೇಟ್ ಕಾಫಿ ತೋಟದ ಮಧ್ಯೆ ಸಂಶಯಾಸ್ಪದ ರೀತಿಯಲ್ಲಿ ಹೆಣ್ಣು ಕಾಡಾನೆ ಸತ್ತು ಬಿದ್ದಿರುವ ಘಟನೆ ನಡೆದಿದೆ.

 ಘಟನೆಯ ವೇಳೆ ತಾಯಿ ಆನೆಯ ಬಳಿಯೇ ಮರಿ ಆನೆ ನಿಂತು ಚೀರಾಡಿರುವ ದೃಶ್ಯ ಸ್ಥಳೀಯರ ಕಣ್ಣೀರು ತರಿಸಿದೆ. ತಾಯಿಯನ್ನು ಕಳೆದುಕೊಂಡ ಆವೇಶದಲ್ಲಿ ಮರಿ ಆನೆ ಮೂಕರೋಧನೆ ಮಾಡುತ್ತಿತ್ತು. ಆನೆ ಮರಿಯ ಚೀರಾಟದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹೆಣ್ಣಾನೆ ಸತ್ತು ಬಿದ್ದಿರುವುದು ಕಂಡು ಬಂದಿದೆ.

ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗೆ ಗುಂಡು ತಗುಲಿದೆಯೇ ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0