ಬೆಂಗಳೂರು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮಹಿಳಾ ಪೈಲಟ್‌ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

Nov 25, 2025 - 13:43
 0  1k
ಬೆಂಗಳೂರು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮಹಿಳಾ ಪೈಲಟ್‌ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
Photo credit: TV09 (ಸಾಂದರ್ಭಿಕ ಚಿತ್ರ)

ಬೆಂಗಳೂರು, ನ. 24: ಲೇ ಓವರ್ ಅವಧಿಯಲ್ಲಿ ಫೈವ್ ಸ್ಟಾರ್ ಹೋಟೆಲ್‌ ನಲ್ಲಿ ವಾಸ್ತವ್ಯ ಇದ್ದ ಮಹಿಳಾ ಸಹ-ಪೈಲಟ್‌ ಮೇಲೆ ಪೈಲಟ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಬೆಳಕಿಗೆ ಬಂದಿದೆ. ಚಾರ್ಟರ್ಡ್ ವಿಮಾನದ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವೆಂಕಟೇಶ್ವರ ವಿಮಾನಯಾನ ಸಂಸ್ಥೆಯ ಚಾರ್ಟರ್ಡ್ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪೈಲಟ್ ಹಾಗೂ ಇಬ್ಬರು ಪುರುಷ ಪೈಲಟ್‌ಗಳು ನವೆಂಬರ್ 18ರಂದು ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಿಂದ ಪುಟ್ಟಪರ್ತಿ ಮೂಲಕ ಬೆಂಗಳೂರಿಗೆ ಬಂದಿದ್ದರು. ಮುಂದಿನ ಹಾರಾಟದ ಕಾರಣದಿಂದ ನಗರದ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಲೇ ಓವರ್ ಬುಕಿಂಗ್ ಮಾಡಿಕೊಂಡಿದ್ದರು.

ಅದೇ ರಾತ್ರಿ, ರೋಹಿತ್ ಶರಣ್ ಎಂದು ಗುರುತಿಸಲ್ಪಟ್ಟ ಸಹ ಪೈಲಟ್, ಮಹಿಳಾ ಪೈಲಟ್‌ ರನ್ನು ಸಿಗರೇಟ್ ಸೇದಲು ಬರುವಂತೆ ಕರೆದುಕೊಂಡು ಹೋಗಿದ್ದಾನೆ. ಸ್ಮೋಕಿಂಗ್‌ ಝೋನ್‌ ನಿಂದ ಹಿಂತಿರುಗುವ ವೇಳೆ ತನ್ನ ರೂಂಗೆ ಬಲವಂತವಾಗಿ ಎಳೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. 

ನವೆಂಬರ್ 20ರಂದು ಹೈದರಾಬಾದ್‌ಗೆ ಹಿಂತಿರುಗಿದ ಮಹಿಳಾ ಪೈಲಟ್, ಘಟನೆ ಕುರಿತು ವಿಮಾನ ಸಂಸ್ಥೆಗೆ ಮಾಹಿತಿ ನೀಡಿದ ಬಳಿಕ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ಪ್ರಕರಣ ಅಲ್ಲಿ ದಾಖಲಾಗಿದ್ದರೂ, ಘಟನೆ ಬೆಂಗಳೂರಿನಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0