ಕಂಡಕರೆಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

Mar 20, 2026 - 11:07
 0  453
ಕಂಡಕರೆಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಚೆಟ್ಟಳ್ಳಿ; ಸಮೀಪದ ಕಂಡಕರೆಯಲ್ಲಿ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಫಿತ್ರ್ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಕಂಡಕರೆಯ ಮಸ್ಜಿದ್ ತಖ್ವಾದಲ್ಲಿ ಈದ್ ನಮಾಜ್ ಗೆ ಮಹಲ್ ಖತೀಬರಾದ ಸುಫಿಯಾನ್ ಸಹದಿ ಅವರು ನೇತೃತ್ವ ವಹಿಸಿದರು. ನಂತರ ಕಂಡಕರೆಯ ಖಬರ್ ಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಮುಸ್ಲಿಂ ಬಾಂಧವರು ಪರಸ್ಪರ ಹಸ್ತಲಾಘವ ಮಾಡುವುದರ ಮೂಲಕ ಈದ್ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಕಂಡಕರೆ ಮಹಲ್ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಹಾಜಿ,ಕಾರ್ಯದರ್ಶಿ ಶರ್ಫುದ್ದೀನ್,ಸಹ ಕಾರ್ಯದರ್ಶಿ ಗಫೂರ್,ಉಪಾಧ್ಯಕ್ಷರಾದ ಕೆ.ಎ ಹುಸೈನ್,ಸೈಫುದ್ದೀನ್ ಸಖಾಫಿ ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0