ನಾಪೋಕ್ಲುವಿನ ವಿವಿಧೆಡೆ ಸಂಭ್ರಮದ ಷಷ್ಠಿ ಆಚರಣೆ
admincoorgdaily
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಹೋಬಳಿ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಷಷ್ಟಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಾಪೋಕ್ಲು ಬಳಿಯ ಹಳೇ ತಾಲೂಕಿನಲ್ಲಿರುವ ಶಿವಚಾಳಿಯಂಡ ಕುಟುಂಬದ ನಾಥನ ಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಟಿಯ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.ಅರ್ಚಕರಾದ ಜಗದೀಶ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ಕುಟುಂಬದ ಪ್ರಮುಖರಾದ ಶಿವಚಾಳಿಯಂಡ ಮಾದಪ್ಪ, ಸಹದೇವ, ಅಂಬಿ ಕಾರ್ಯಪ್ಪ, ಕಿಶೋರ್ ಬೋಪಣ್ಣ, ಸುಭಾಷ್, ಲವ ಸೇರಿದಂತೆ ಕುಟುಂಬ ಸದಸ್ಯರು ಮತ್ತಿತರರು ಹಾಜರಿದ್ದರು.
ಅದರಂತೆ ಸಮೀಪದ ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ವಿಶೇಷ ನಾಗನ ಪೂಜೆಯನ್ನು ನೆರವೇರಿಸಲಾಯಿತು.ಬಲ್ಲಮಾವಟಿ, ನೆಲಜಿ ,ಪುಲಿಕೋಟು ಗ್ರಾಮದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆ ನೆರವೇರಿಸಲಾಯಿತು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ಸದಸ್ಯರು, ತಕ್ಕ ಮುಖ್ಯಸ್ಥರು,ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.