ಅಸುರಕ್ಷಿತ ಆಹಾರ ಪದಾರ್ಥ ತಯಾರಕರ ಮೇಲೆ ದಂಡ
ಮಡಿಕೇರಿ ಆ.31:-ಕೊಡಗು ಜಿಲ್ಲೆಯಲ್ಲಿ 2025-26 ಮತ್ತು 2026-27 ಪ್ರಸ್ತುತ ದಿನಾಂಕದವರೆಗೆ ಒಟ್ಟು 899 ಆಹಾರ ಮಾದರಿಗಳನ್ನು Chief Food Analyst, Division Food Laboratory, Mysore ಇಲ್ಲಿ ವಿಶ್ಲೇಷಣೆ ಮಾಡಲಾಗಿದ್ದು. 4 ಆಹಾರ ಮಾದರಿಯ ವಿಶ್ಲೇಷಣಾ ವರದಿಯೂ ಅಸುರಕ್ಷಿತ ಮತ್ತು 2 ಆಹಾರ ಮಾದರಿಯ ವಿಶ್ಲೇಷಣಾ ವರದಿಯೂ ಕಡಿಮೆ ಗುಣಮಟ್ಟ ಎಂದು ವರದಿ ಬಂದಿರುತ್ತದೆ.
ಅಸುರಕ್ಷಿತ ಆಹಾರ ಪದಾರ್ಥ ತಯಾರು/ ಮಾರಾಟ ಮಾಡುತ್ತಿರುವವರ ವಿರುದ್ಧ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪದಾರ್ಥ ತಯಾರು/ ಮಾರಾಟ ಮಾಡುತ್ತಿರುವವರ ವಿರುದ್ಧ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು, ಕೊಡಗು ಜಿಲ್ಲೆ ರವರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ ನಿಬಂಧನೆಗಳು -2011 ರ ಅನುಸಾರ ಸೆಕ್ಷನ್ 51 ಮೊಕದ್ಧಮೆ ದಾಖಲಿಸಿಲಾಗಿದೆ ಮತ್ತು ಆಹಾರ ಪದಾರ್ಥ ತಯಾರು/ಮಾರಾಟಗಾರರಿಗೆ ಅಪರ ಜಿಲ್ಲಾಧಿಕಾರಿ ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು ದಂಡವನ್ನು ಒಟ್ಟು ರೂ.10 ಸಾವಿರ ವಿಧಿಸಿರುತ್ತಾರೆ.
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿರುವ ಸ್ಪೈಸಸ್(ಮಸಾಲೆ ಪದಾರ್ಥಗಳು) ಹಾಗೂ ಚಾಕೊಲೇಟ್ಸ್ ಅಂಗಡಿಗಳು, ವ್ಯಾಪಾರ ಹಾಗೂ ಮಸಾಲೆ ಪದಾರ್ಥಗಳ ಮಾರಾಟ ನಡೆಸುತ್ತಿರುವ ಘಟಕಗಳ ತಪಾಸಣೆ ನಡೆಸಿದಾಗ ಆಹಾರ ಪದಾರ್ಥಗಳಿಗೆ ಆಹಾರ ಪರವಾನಿಗೆ ಹಾಗೂ ಲೇಬಲಿಂಗ್ ನಿಯಮ ಪಾಲನೆ ಮಾಡದಿರುವುದು ಕಂಡು ಬಂದಿದ್ದು ಸುಮಾರು 17 ಅಂಗಡಿಗಳ ವಿರುದ್ಧ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು, ಕೊಡಗು ಜಿಲ್ಲೆ ರವರಲ್ಲಿ ಸೆಕ್ಷನ್ 52 ರಲ್ಲಿ ಮೊಕದ್ಧಮೆ ದಾಖಲಿಸಲಾಗಿದೆ. ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು ಒಟ್ಟು ರೂ.85 ದಂಡವನ್ನು ವಿಧಿಸಿರುತ್ತಾರೆ.
ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳಲ್ಲಿ ಸೆಕ್ಷನ್ 56 ಮತ್ತು ಸೆಕ್ಷನ್ 63 ರ ಅಡಿಯಲ್ಲಿ ಒಟ್ಟು ರೂ.40 ಸಾವಿರ ದಂಡವನ್ನು ವಿಧಿಸಿರುತ್ತಾರೆ. ಅಂಕಿತಾಧಿಕಾರಿಗಳ ನೋಟಿಸ್ ಮತ್ತು ಗ್ರಾಹಕರ ದೂರುಗಳಿಗೆ ಸಂಬಂಧಪಟ್ಟಂತೆ 2025-26 ಮತ್ತು 2026-27 ಪ್ರಸ್ತುತ ದಿನಾಂಕದ ವರೆಗೆ ಒಟ್ಟು ರೂ.1 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಡಾ.ಅನಿಲ್ ಧಾವನ್ ಇ. ಅವರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
