ಪ್ರಥಮ ವರ್ಷದ ಮುಲ್ಲೇಂಗಡ ಕೊಡವ ಕೌಟುಂಬಿಕ ಕಬಡ್ಡಿ ಪಂದ್ಯಾವಳಿಯ ಲೋಗೋ ಅನಾವರಣ

Dec 28, 2025 - 20:05
 0  471
ಪ್ರಥಮ ವರ್ಷದ ಮುಲ್ಲೇಂಗಡ ಕೊಡವ ಕೌಟುಂಬಿಕ ಕಬಡ್ಡಿ ಪಂದ್ಯಾವಳಿಯ ಲೋಗೋ ಅನಾವರಣ

ವಿರಾಜಪೇಟೆ: ತಾಲೂಕಿನ ಕಂಡಂಗಾಲದಲ್ಲಿರುವ ಮುಲ್ಲೇಂಗಡ ಐನ್ ಮನೆಗೆ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಪ್ರಥಮ ವರ್ಷದ ಮುಲ್ಲೇಂಗಡ ಕಪ್ ಕೊಡವ ಕೌಟುಂಬಿಕ ಕಬಡ್ಡಿ ಪಂದ್ಯಾವಳಿಯ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಲಾಂಛನವನ್ನು ಶಾಸಕರು ಬಿಡುಗಡೆಗೊಳಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಮುಲ್ಲೇಂಗಡ ಕಬಡ್ಡಿ ಟೂರ್ನಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಸಂಚಾಲಕ ಮುಲ್ಲೇಂಗಡ ಮುಧೋಶ್ ಪೂವಯ್ಯ, ಕುಟುಂಬದ ಹಿರಿಯರಾದ ಕಿಟ್ಟು ಕುಟ್ಟಪ್ಪ , ಸುರೇಶ ಭೀಮಯ್ಯ , ವಿಠಲ, ಹಾಗೂ ಮಕ್ಕಳು ಭಾಗವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0