Kodagu

ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಬಹುಮಾನ

admincoorgdaily

ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಬಹುಮಾನ

ಮಡಿಕೇರಿ, ಮೇ.30:-ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಇವರ ವತಿಯಿಂದ ನಡೆಸಿರುವ ಅಂತರ ಕೆಐಸಿಎಂ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ ತರಬೇತಿ ಸಂಸ್ಥೆಯ ಅಭ್ಯರ್ಥಿಗಳಾದ ಶ್ರೇಯ ಪೊನ್ನಪ್ಪ ಬಿ. ಅವರು ರಾಜ್ಯಕ್ಕೆ ಪ್ರಥಮ ಬಹುಮಾನ ಮತ್ತು ಕಾವ್ಯ ಕೆ.ಸಿ ಅವರು ದ್ವಿತೀಯ ಬಹುಮಾನ ಜೊತೆಗೆ ಪರ್ಯಾಯ ಪಾರಿತೋಷಕ ಪಡೆದಿದ್ದಾರೆ.

 ಇವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೆಶಕರಾದ ಬಿ.ಶಿವಸ್ವಾಮಿ ಮತ್ತು ಕಾರ್ಯದರ್ಶಿಗಳಾದ ಅಶ್ವತ್ಥ ನಾರಾಯಣ ಅವರು ಬಹುಮಾನ ವಿತರಿಸಿದ್ದಾರೆ ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.