ಮೀನು ಮರಿ ವಿತರಣೆ
admincoorgdaily

ಮಡಿಕೇರಿ:-ಪ್ರತಿ ವರ್ಷದಂತೆ 2026-27ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿ ಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ ಮೀನುಮರಿಗಳು ಲಭ್ಯವಿರುತ್ತದೆ. ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕಾಗಿ ಕೋರಿದೆ. ಹಾಗೂ ಮೀನುಗಾರಿಕೆ ಇಲಾಖೆಯಿಂದ ಉಚಿತವಾಗಿ ಸಾಮಾನ್ಯ ಗೆಂಡೆ ಅಥವಾ ತಿಲಾಪಿಯ ತಳಿ ಮೀನುಮರಿಗಳನ್ನು ವಿತರಿಸಲಾಗುವುದು.
ಅರ್ಜಿ ಸಲ್ಲಿಸಲು ಆಗಸ್ಟ್, 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕುಶಾಲನಗರ ತಾಲ್ಲೂಕು ಸಚಿನ್ ಎಸ್.ಎಂ. ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ.9886717626, ಮಂಜು ದೂ.ಸಂ.8296765595, ಮಡಿಕೇರಿ ತಾಲ್ಲೂಕು ವಿನಯ್ ಪಿ.ಆರ್. ದೂ.ಸಂ.9769070850, ಸೋಮವಾರಪೇಟೆ ತಾಲ್ಲೂಕು ನಿರ್ವಾಣಿ ಎಚ್.ಇ ದೂ.ಸಂ.9448918782 ಹಾಗೂ ಪೊನ್ನಂಪೇಟೆ ತಾಲ್ಲೂಕು ನಿಶಾಂತ್ ಬಿ.ಕೆ. ದೂ.ಸಂ.9731363143 ನ್ನು ಹಾಗೂ ಮೀನುಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗಳನ್ನು ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.