ಕುಶಾಲನಗರ ಪುರಸಭೆ ಕಛೇರಿಯೊಳಗಡೆ ಮೀನು ವ್ಯಾಪಾರ!
ಕುಶಾಲನಗರ : ಮಂಗಳವಾರ ಕುಶಾಲನಗರದಲ್ಲಿ ಸಂತೆ ದಿನ ,ಊರಿನ ಸುತ್ತಮುತ್ತಲಿನಿಂದ ಸಾವಿರಾರು ಸಂಖ್ಯೆಯಲ್ಲಿ ತರಕಾರಿ, ಮೀನು, ಮಾಂಸ ಹಾಗೂ ಇತರೆ ವಸ್ತುಗಳನ್ನು ಖರೀದಿಸಲು ಜನರು ಆಗಮಿಸುತ್ತಾರೆ ,ಆದೇ ರೀತಿಯಲ್ಲಿ ಮಾರಾಟಗಾರರು ಕೂಡ ಬರುತ್ತಾರೆ ತಮ್ಮ ನಿಗದಿತ ಜಾಗದಲ್ಲಿ ದಿನನಿತ್ಯದ ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಾರೆ ಆದರೇ ಇಂದು ಇದಕ್ಕೆ ತದ್ವಿರುದ್ಧವಾಗಿ ಕುಶಾಲನಗರದ ಪುರಸಭೆಯ ಕಛೇರಿಯ ಒಳಗಡೆ ಹೊಳೆಯ ಮೀನನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.
ಕಛೇರಿ ಒಳಗೆ ಮೀನು ವ್ಯಾಪಾರ ಮಾಡುವ ಮೂಲಕ ಪ್ರತಿಭಟನೆ : ನಗರದ ಐ ಬಿ ರಸ್ತೆ ಅರಣ್ಯ ಕಛೇರಿ ಮುಂಭಾಗದಲ್ಲಿ ಸ್ಥಳೀಯ ಬೆಸ್ತರು ಹೂಳೆಯ ಮೀನನ್ನು ದಿನನಿತ್ಯ ವ್ಯಾಪಾರ ಮಾಡುತ್ತಿದ್ದು ಇಂದು ಸಂತೆ ದಿನ ಆದ ಕಾರಣ ಭರ್ಜರಿ ವ್ಯಾಪಾರ ನಡೆಯುತಿತ್ತು ,ಈ ಸಂದರ್ಭದಲ್ಲಿ ಕುಶಾಲನಗರ ಪುರಸಭೆ ಸಿಬ್ಬಂದಿಗಳು ಮೀನು ವ್ಯಾಪಾರ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ,ಮೀನಿನ ವಾಸನೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಬಂದಿರುವ ಹಿನ್ನಲೆಯಲ್ಲಿ ಮೀನು ವ್ಯಾಪಾರವನ್ನು ಎತ್ತಗಂಡಿ ಮಾಡಿಸಿದರು .ಇದಾದ ಕೆಲವು ಹೊತ್ತಿನಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಮಾರ್ಗದರ್ಶನದಲ್ಲಿ ಮೀನು ವ್ಯಾಪಾರಿ ತನ್ನ ಮೀನಿನ ವ್ಯಾಪಾರವನ್ನು ಪುರಸಭೆ ಕಛೇರಿಯ ಒಳಗಡೆ ಮಾಡುವ ಮೂಲಕ ವಿನೂತನ ರೀತಿಯ ಪ್ರತಿಭಟನೆಗೆ ಮುಂದಾದರು .ಇವರ ಪ್ರತಿಭಟನೆಗೆ ಬೆಂಬಲವನ್ನು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಚರಣ್ ,ಮಾಜಿ ಸದಸ್ಯ ಮಧುಸೂದನ್ ,ಪ್ರಮುಖರಾದ ಎಂ.ಡಿ ಕೃಷ್ಣಪ್ಪ ,ಪ್ರಶಾಂತ್ ,ಸುಮನ್ ,ಇತರರು ನೀಡಿದರು .ಹೊಳೆಯ ಮೀನಿನ ವಾಸನೆ ಕಛೇರಿಯ ಒಳಗಡೆ ಎಲ್ಲಾ ಹರಡಿತು .ಪುರಸಭೆ ಮುಖ್ಯಾಧಿಕಾರಿ ಕಛೇರಿಯಲ್ಲಿ ಇಲ್ಲದಿದ್ದ ಕಾರಣ ಪುರಸಭೆ ಇತರೆ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪ್ರತಿಭಟನೆಯನ್ನು ನಿಲ್ಲಿಸಿ ಮೀನುಗಳನ್ನು ಹೊರಗಡೆ ತೆಗೆದುಕೊಂಡು ಹೋಗಲು ಹೇಳಿದರು ಕೂಡ ಮೀನು ವ್ಯಾಪಾರಸ್ಥರು ಜಗ್ಗಲಿಲ್ಲ ಹೊರಗಡೆ ಹೋಗಲಿಲ್ಲ. ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನೆಗೆ ವಿರುದ್ಧ ವ್ಯಕ್ತಪಡಿಸಿದ ಸ್ಥಳೀಯ ನಾಯಕರು : ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ,ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ,ಪಂಚಾಯತಿ ಮಾಜಿ ಸದಸ್ಯರಾದ ಶಿವಶಂಕರ್,ಪ್ರಕಾಶ್,ಪ್ರಮುಖರಾದ ಕಿರಣ್ ,ರೋಷನ್ ,ಆನಂದ್ ಹಾಗೂ ಇತರರು ಆಗಮಿಸಿ ಪುರಸಭೆ ಕಛೇರಿಯ ಒಳಗಡೆ ಮೀನು ವ್ಯಾಪಾರ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು .ನಿಮ್ಮ ಹೋರಾಟ ಸರಿಯಾದ ಕ್ರಮವಲ್ಲ ಕಛೇರಿಯ ಒಳಗಡೆಯಿಂದ ಕೂಡಲೇ ಈ ಮೀನನ್ನು ತೆಗೆದುಕೊಂಡು ಹೋಗಿ .ನಿಮಗೆ ಸಮಸ್ಯೆಗಳಿದ್ದರೆ ಶಾಸಕರ ಗಮನಕ್ಕೆ ತರುವ ಮೂಲಕ ಸರಿಯಾದ ವ್ಯವಸ್ಥೆಯನ್ನು ಮಾಡುವ ಎಂದರು .ಈ ಸಮಯದಲ್ಲಿ ಮಾತಿನ ಚಕಮಕಿ ನಡೆದು ಕೆಲವು ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ನಂತರ ಸ್ಥಳೀಯ ಪ್ರಮುಖರು, ಪುರಸಭೆ ಅಧಿಕಾರಿಗಳು ,ಪೋಲಿಸ್ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪ್ರತಿಭಟನೆ ನಡೆಸುತ್ತಿದ್ದ ಮೀನು ವ್ಯಾಪಾರಸ್ಥರನ್ನು ಹೊರಗಡೆ ಕಳಿಸಿದರು.
ಸಾರ್ವಜನಿಕ ವಲಯದಲ್ಲಿ ಅಸಮಾಧಾನ : ಕುಶಾಲನಗರದ ಆಡಳಿತ ಭವನದ ಒಳಗಡೆ ಹೊಳೆಯ ಮೀನು ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿರುವ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ,ಪುರಸಭೆ ಕಟ್ಟಡವು ಕೇವಲ ಒಂದು ಕಟ್ಟಡವಲ್ಲ ಅದು ಸಮಸ್ತ ಕುಶಾಲನಗರ ಜನರ ಆಡಳಿತ ಕೇಂದ್ರ ಇಂತಹ ಜಾಗದಲ್ಲಿ ಈ ರೀತಿಯ ಹೋರಾಟ ಸರಿಯಾದ ಕ್ರಮವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ.ಟಿ.ಆರ್.ಪ್ರಭುದೇವ್, ಕುಶಾಲನಗರ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
