ಲೈನ್ ಮನೆಯಲ್ಲಿ ಕಾರ್ಮಿಕರಿಂದ ಗಾಂಜಾ ಮಾರಾಟ: ಅಸ್ಸಾಂ ಮೂಲದ ಐವರ ಬಂಧನ
ಗೋಣಿಕೊಪ್ಪ: ತೋಟವೊಂದರ ಲೈನ್ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಗೋಣಿಕೊಪ್ಪ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಮಾಲು ಸಮೇತ ಅಸ್ಸಾಂ ಮೂಲದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಣಿಕೊಪ್ಪ ಸಮೀಪದ ಅತ್ತೂರು ತಿರುಮಲ ಕಾಫಿ ತೋಟದ ಲೈನ್ ಮನೆಯಲ್ಲಿ ಪ್ರಸ್ತುತ ವಾಸವಿರುವ ಅಜತ್ ಅಲಿ (25), ಆಸದೊಲ್ ಹಕ್ (34), ಪೊನ್ನಂಪೇಟೆ ಕೊಡವ ಸಮಾಜ ಹತ್ತಿರದ ತಿಮ್ಮಯ್ಯರವರ ಲೈನ್ ಮನೆಯಲ್ಲಿ ವಾಸವಿರುವ ಆಸಾತುಲ್ಲಾ ಹಕ್ (25), ಪೊನ್ನಂಪೇಟೆ ಹೆಚ್.ಪಿ. ಪೆಟ್ರೋಲ್ ಬಂಕ್ ನ ಕೆಲಸಗಾರ ನೂರ್ ಹಕ್ (23) ಮತ್ತು ಅಜಿತಾಲಿ ಎಂಬುವವರೇ ಅಸ್ಸಾಂ ಮೂಲದ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 6.9 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ.
ಗೋಣಿಕೊಪ್ಪಲು ವೃತ್ತ ನಿರೀಕ್ಷಕರಾದ ಶಿವರಾಜ್ ಆರ್. ಮುಧೋಳ್, PSI ಕಾಳೇಗೌಡ, ಸಿಬ್ಬಂದಿಗಳಾದ ವೆಂಕಟೇಶ್, ಹೆಚ್.ಸಿ ಲೋಕೇಶ್, ಪಿಸಿ ಭರತ್, ಗಿರೀಶ್, ಮಹೇಂದ್ರ, ರಘು ಹಾಗೂ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
