ಅಪರಿಚಿತ ವಾಹನ ಡಿಕ್ಕಿ:ಐದು ದನಗಳು ಸಾವು

Aug 9, 2025 - 12:35
Aug 9, 2025 - 12:41
 0  590
ಅಪರಿಚಿತ ವಾಹನ ಡಿಕ್ಕಿ:ಐದು ದನಗಳು ಸಾವು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ–ಹೆಬ್ಬರಿಗೆ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಏಳು ದನಗಳು ಗಂಭೀರವಾಗಿ ಗಾಯಗೊಂಡಿದ್ದು, ಅವುಗಳಲ್ಲಿ ಐದು ದನಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಘಟನೆಯ ವಿವರ ಹೀಗಿದೆ: ರಾತ್ರಿ ವೇಳೆ ಮೋಡ ಕವಿದ ವಾತಾವರಣದಲ್ಲಿ, ರಸ್ತೆಯ ಮೇಲೆ ಮಲಗಿದ್ದ ದನಗಳನ್ನು ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ಬಲೆಗೆ ಸಿಲುಕಿದ ದನಗಳಲ್ಲಿ ಎರಡು ಬದುಕುಳಿದರೂ ಗಂಭೀರ ಗಾಯಗಳಿಂದ ಬಳಲುತ್ತಿವೆ. ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0