8 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ: ಫುಡ್ ಡೆಲಿವರಿ ಬಾಯ್ ಬಂಧನ

Oct 2, 2025 - 20:52
 0  490
8 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ: ಫುಡ್ ಡೆಲಿವರಿ ಬಾಯ್ ಬಂಧನ
Photo credit: istock photo

ಗುರುಗ್ರಾಮ: ಗುರುಗ್ರಾಮದ ಸೆಕ್ಟರ್–93ರಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ 21 ವರ್ಷದ ಡೆಲಿವರಿ ಬಾಯ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

 ಬುಧವಾರ ಸಂಜೆ ಬಾಲಕಿಯ ಅಪಹರಣದ ಕುರಿತು ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಸೆಕ್ಟರ್–10 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ನಂತರ ತುರ್ತು ಕ್ರಮ ಕೈಗೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಾಲಕಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕುಟುಂಬದ ವಶಕ್ಕೆ ಒಪ್ಪಿಸಿದರು.

ಬಂಧಿತನನ್ನು ಸಮದ್ (21), ಸೆಕ್ಟರ್–83 ನಿವಾಸಿ ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ, ಆಹಾರ ಡೆಲಿವರಿ ನೆಪದಲ್ಲಿ ಬಾಲಕಿಗೆ ಆಮಿಷವೊಡ್ಡಿ ಅಪಹರಿಸಿ ದೌರ್ಜನ್ಯ ಎಸಗಿರುವುದು ಬಹಿರಂಗವಾಗಿದೆ.

ಪೊಲೀಸರು ಪ್ರಾಥಮಿಕ ದೂರು ದಾಖಲಿಸಿದ ಬಳಿಕ, ಪೊಕ್ಸೊ ಕಾಯ್ದೆಯ ಸೆಕ್ಷನ್ 6 ಅಡಿ ಗಂಭೀರ ಆರೋಪಗಳನ್ನು ಸೇರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

 “ಆರೋಪಿ ಖಾಸಗಿ ಕಂಪೆನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಆತ ಆಹಾರ ತಂದುಕೊಡುವ ನೆಪದಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅಪರಾಧ ಎಸಗಿದ್ದಾನೆ,” ಎಂದು ಗುರುಗ್ರಾಮ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0