ಕುಟ್ಟ ಹೋಂ ಸ್ಟೇಯಲ್ಲಿ ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರಸಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ;ಇಬ್ಬರ ಬಂಧನ

Apr 22, 2026 - 10:18
Apr 22, 2026 - 10:34
 0  2.1k
ಕುಟ್ಟ ಹೋಂ ಸ್ಟೇಯಲ್ಲಿ ಸಿಹಿ ಪಾನಕಕ್ಕೆ  ಮತ್ತು ಬರುವ ಔಷಧಿ ಬೆರಸಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ;ಇಬ್ಬರ ಬಂಧನ

ಪೊನ್ನಂಪೇಟೆ; ಅಮೆರಿಕಾ ಮೂಲದ ಮಹಿಳೆ ಮೇಲೆ ಕುಟ್ಟ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿಬಇಬ್ಬರು ಆರೋಪಿಗಳ ಬಂಧನವಾಗಿದೆ. ವಾಶಿಂಗ್ಟಮ್ ಮೂಲದ ಮಹಿಳೆ ಮೇಲೆ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತನಿಂತ ಅತ್ಯಾಚಾರವಾಗಿದ್ದು, ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರಸಿ ಕೊಟ್ಟ ಬಳಿಕ ಅತ್ಯಾಚಾರ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕುಟ್ಟ ಗ್ರಾಮದ ದೇವಿ ವಿಲ್ಲಾ ಎಂಬ ಹೋಂಸ್ಟೇ ಯಲ್ಲಿ ಘಟನೆ ನಡೆದಿದೆ. ಹೋಂಸ್ಟೇ ಮಾಲೀಕ ವಿಶಾಲ್ ಎಂಬುವವರಿಂದ ಪ್ರಕರಣ ಮುಚ್ಚಲು ಪ್ರಯತ್ನ ನಡೆದಿದ್ದು ಆರೋಪಿ ಹಾಗೂ ಹೋಂಸ್ಟೇ ಮಾಲೀಕ ಜೈಲು ಪಾಲಾಗಿದ್ದಾರೆ. ಇಂದು ಜಾಮೀನು ಪಡೆಯಲು ವಕೀಲರಿಂದ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ಮೇ 3ರ ವರೆಗೂ ನ್ಯಾಯಾಂಗ ಬಂಧನಲ್ಲಿಡಲು ಈಗಾಗಲೇ ಆದೇಶಿಸಲಾಗಿದೆ.

ಮೂರು ದಿನದ ಬಳಿಕ ಮೈಸೂರಿಗೆ ಹೋಗುವುದಾಗಿ ಹೇಳಿ ಹೊರಟ ವಿದೇಶಿ ಸಂತ್ರಸ್ತೆ, ಬಳಿಕ ಅಮೆರಿಕದಲ್ಲಿರುವ ರಾಯಬಾರಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಇಮೇಲ್ ಮೂಲಕ ಸಂಪರ್ಕಿಸಿ, ಅಲ್ಲಿನ ಅಧಿಕಾರಿಗಳ ಸೂಚನೆ ಮೇರೆಗೆ ಪ್ರಕರಣ ದಾಖಲಾಗಿದೆ.

ಜಿಲ್ಲೆಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದು, ಡೆಲ್ಲಿ ಹಾಗೂ ಚೆನ್ನೈ ಕಚೇರಿಗಳಿಂದ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಕೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಹೇಳಿದ್ದಾರೆ.

What's Your Reaction?

Like Like 1
Dislike Dislike 0
Love Love 2
Funny Funny 1
Angry Angry 4
Sad Sad 0
Wow Wow 0