ಕುಟ್ಟ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ;ಆರೋಪಿ ಹೋಂಸ್ಟೇ ಮಾಲೀಕನಿಗೆ ಜಾಮೀನು

May 3, 2026 - 12:47
 0  744
ಕುಟ್ಟ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ;ಆರೋಪಿ ಹೋಂಸ್ಟೇ ಮಾಲೀಕನಿಗೆ ಜಾಮೀನು

ಮಡಿಕೇರಿ, ಮೇ. 2: ವಿದೇಶಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಹತ್ತಿಕ್ಕಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಹೋಂಸ್ಟೇ ಮಾಲೀಕನಿಗೆ ಶನಿವಾರ ಜಾಮೀನು ದೊರೆತಿದೆ. ಇತ್ತೀಚೆಗೆ ಅಮೇರಿಕದ ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕುಟ್ಟದ ಹೋಂಸ್ಟೇಯೊಂದರ ಸಿಬ್ಬಂದಿ ಮತ್ತು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿತ್ತು.

 ಕುಟ್ಟದಲ್ಲಿರುವ ದೇವಿ ವಿಲ್ಲಾ ಹೋಂಸ್ಟೇಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದನೆನ್ನಲಾದ ಪ್ರಮುಖ ಆರೋಪಿ ಅಡುಗೆ ಸಿಬ್ಬಂದಿ ಜಾರ್ಖಂಡ್ ಮೂಲದ ಬೃಜೇಶ್ ಕುಮಾರ್ ಹಾಗೂ ಈ ಪ್ರಕರಣ ಗೊತ್ತಾದರೂ ನಿರ್ಲಕ್ಷ್ಯ ಮಾಡಿದ ಆರೋಪದ ಮೇಲೆ ಮಾಲೀಕ ಪಿ.ಎ. ಪೊನ್ನಪ್ಪ ಅವರುಗಳನ್ನು ಬಂಧಿಸಲಾಗಿತ್ತು. ಶನಿವಾರ ಮಾಲೀಕ ಪೊನ್ನಪ್ಪ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

 ವೀರಾಜಪೇಟೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ನಡೆಸಿದ ನಂತರ ರೂ. 1 ಲಕ್ಷ ಬಾಂಡ್‌ನೊಂದಿಗೆ ಇಬ್ಬರು ಜಾಮೀನುದಾರರ ಭದ್ರತೆಯೊಂದಿಗೆ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 1
Angry Angry 2
Sad Sad 0
Wow Wow 1