ಅರಣ್ಯ ಇಲಾಖೆಯಿಂದ 'ವಿಶ್ವ ಆನೆ ದಿನ' ಆಚರಣೆ
admincoorgdaily

ಕುಶಾಲನಗರ, ಆ.11 : ಕೊಡಗು ವಲಯ ಅರಣ್ಯ ಇಲಾಖೆಯಿಂದ ಬುಧವಾರ 'ವಿಶ್ವ ಆನೆ ದಿನ'ವನ್ನು ಅರ್ಥಪೂರ್ಣವಾಗಿ 'ಕಾವೇರಿ ನಿಸರ್ಗಧಾಮ'ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಾಗೃತಿ ಚಲನಚಿತ್ರ ಪ್ರದರ್ಶನ, ಜಾಗೃತಿ ವಸ್ತು ಪ್ರದರ್ಶನ, ಆನ್ಲೈನ್ ಕಾರ್ಯಾಗಾರ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್ .ರಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.