ಕಾಫಿ ತೋಟದಲ್ಲಿದ್ದ 5 ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಿದ ಅರಣ್ಯ ಇಲಾಖೆ
ಕುಶಾಲನಗರ: ಕುಶಾಲನಗರ ಅರಣ್ಯ ವಲಯದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 5 ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಇಂದು ಯಶಸ್ವಿಯಾಗಿ ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಆನೆಕಾಡು ಶಾಖೆಯ ಹೊರೂರು, ಮೋದೂರು, ಕೆದಕಲ್ ಮತ್ತು ಮೀನುಕೊಲ್ಲಿ ಶಾಖೆಯ ಚೇರಳ, ಈರಳೆ, ವಳಮುಡಿ ಗ್ರಾಮಗಳ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಸಂಚರಿಸಿ ಬೆಳೆಗಳಿಗೆ ಹಾನಿ ಮಾಡುತ್ತಿತ್ತು. ಸ್ಥಳೀಯ ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
DRFO ಮಧುಕುಮಾರ್, DRFO ಸಚಿನ್ ನಿಂಬಾಲ್ಕರ್, BFO ಕುಡ್ಲೆಪ್ಪ, BFO ನಾಗರಾಜ್ ನೇತೃತ್ವದಲ್ಲಿ ಮಡಿಕೇರಿ, ಆನೆಕಾಡು, ಮೀನುಕೊಲ್ಲಿ RRT ಮತ್ತು ETF ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತುರ್ತು ಅಗತ್ಯಕ್ಕಾಗಿ ಆಂಬುಲೆನ್ಸ್ ಸೌಲಭ್ಯವನ್ನೂ ಸಜ್ಜಾಗಿಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ, ಢಮಾರು ಮತ್ತು ವಾಹನಗಳ ಮೂಲಕ ಆನೆಗಳನ್ನು ಸುರಕ್ಷಿತವಾಗಿ ಆವಾಸಸ್ಥಾನದ ಕಡೆಗೆ ಅಟ್ಟಿದರು. ಯಾವುದೇ ಪ್ರಾಣಹಾನಿ ಹಾಗೂ ಆಸ್ತಿ ನಷ್ಟವಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
