ಒಂದೇ ಲಾಯಲ್ ಪ್ರವಾಸೋದ್ಯಮ ವಲಯವಾಗಿ ಘೋಷಿಸಲು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಒತ್ತಾಯ

Aug 16, 2026 - 15:52
 0  58
ಒಂದೇ ಲಾಯಲ್ ಪ್ರವಾಸೋದ್ಯಮ ವಲಯವಾಗಿ ಘೋಷಿಸಲು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಒತ್ತಾಯ

ಮಡಿಕೇರಿ: ಕೊಡಗು ಸೇರಿದಂತೆ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಂದೇ ಲಾಯಲ್ ಪ್ರವಾಸೋದ್ಯಮ ವಲಯವಾಗಿ ಘೋಷಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು.

ಮೈಸೂರು ಅರಮನೆಯ ಕೀರ್ತಿ ಜಾಗತಿಕವಾಗಿದೆ. ಆದರೆ ಅದು ದಸರಾಕ್ಕೆ ಮಾತ್ರ ಸೀಮಿತವಾಗಿದೆ. 2013ರ ಬಜೆಟ್‌ನಲ್ಲೇ ಈ ಪ್ರಸ್ತಾವ ಬಂದಿದ್ದರೂ ಅನುಷ್ಠಾನವಾಗಿಲ್ಲ ಎಂದರು.ಕೊಡಗಿನ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಬಂಡವಾಳವಾಗಿಸಿಕೊಂಡು ಪ್ರವಾಸೋದ್ಯಮ ವಿಸ್ತರಿಸಬೇಕು.

ಈ ನಿಟ್ಟಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಕೊಡಗಿನ ಶಾಸಕರು, ಚೇಂಬರ್, ಹೊಟೇಲ್ ಉದ್ಯಮಿಗಳೊಂದಿಗೆ ಚರ್ಚಿಸಿ ಕಾರ್ಯಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು. ಪ್ರವಾಸೋದ್ಯಮವೇ ಹಲವು ದೇಶಗಳ ಆರ್ಥಿಕತೆಗೆ ಆಧಾರ. ಜನಪ್ರಿಯ ತಾಣವಾಗಿರುವ ಕೊಡಗಿನಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಸಬೇಕು. ಇದೇ ವೇಳೆ ಕೊಡಗಿನಿಂದ ಸಚಿವರಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ರಾಜಕಾರಣದಿಂದ ನಿವೃತ್ತಿ ಪಡೆಯುವುದಾಗಿಯೂ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಕೆ.ಎಂ.ಗಣೇಶ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0