ಬುಲ್‌ಡಾಗ್ ದಾಳಿಗೆ ನಾಲ್ಕು ವರ್ಷದ ಬಾಲಕಿ ಬಲಿ

Nov 27, 2025 - 17:27
 0  1.5k
ಬುಲ್‌ಡಾಗ್ ದಾಳಿಗೆ ನಾಲ್ಕು ವರ್ಷದ ಬಾಲಕಿ ಬಲಿ
ಬುಲ್ ಡಾಗ್

ಮುಜಫರ್‌ಪುರ, ನ.27: ಪೂಜೆಗೆ ತೆರಳುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಮೇಲೆ ಬುಲ್‌ಡಾಗ್ ನಾಯಿ ನಡೆಸಿದ ಮಾರಣಾಂತಿಕ ದಾಳಿಯಲ್ಲಿ ಬಾಲಕಿ ಮೃತಪಟ್ಟ ಘಟನೆ ಬಿಹಾರದ ಮುಜಫರ್‌ಪುರ ಜಿಲ್ಲೆಯ ಪರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಜಮಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಶಿವಾನಿ (4) ಕುಟುಂಬದೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ, ಯುವಕನೊಬ್ಬ ಸರಪಳಿಯಲ್ಲಿ ಹಿಡಿದು ಕರೆದುಕೊಂಡು ಹೋಗುತ್ತಿದ್ದ ಬುಲ್‌ಡಾಗ್‌ ಏಕಾಏಕಿ ನಾಯಿ ಮೊದಲು ಮೂವರ ಮಕ್ಕಳತ್ತ ಜಿಗಿದು ದಾಳಿ ಮಾಡಿದ್ದು, ಇಬ್ಬರು ಮಕ್ಕಳು ಓಡಿಹೋಗಿ ಪಾರಾದರೆ, ಕಿರಿಯ ಬಾಲಕಿ ಶಿವಾನಿಗೆ ತಪ್ಪಿಸಿಕೊಳ್ಳುವ ಅವಕಾಶವೇ ಸಿಗಲಿಲ್ಲ.

ಬುಲ್‌ಡಾಗ್ ಆಕೆಯನ್ನು ನೆಲಕ್ಕೆ ಬೀಳಿಸಿ, ತಲೆಯ ಭಾಗದ ಚರ್ಮ ಮತ್ತು ಕೂದಲನ್ನು ಕಿತ್ತು ಹಾಕುವಷ್ಟು ಕ್ರೂರವಾಗಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಎಸ್‌ಕೆಎಂಸಿಎಚ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಾನಿ ಮೃತಪಟ್ಟಿರುವುದು ಆಸ್ಪತ್ರೆ ಮೂಲಗಳು ತಿಳಿಸಿವೆ.

“ಬಾಲಕಿಯ ತಂದೆ ಕಮಲೇಶ್ ಸಾಹ್ನಿ ದೂರು ನೀಡಿದರೆ, ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಠಾಣಾಧಿಕಾರಿ ಚಂದನ್ ಕುಮಾರ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಕುಟುಂಬವು ಇನ್ನೂ ಯಾವುದೇ ದೂರು ದಾಖಲಿಸಿಲ್ಲ. 

ಕೇವಲ 15 ದಿನಗಳ ಹಿಂದೆ ಸೋನೆಪುರ ಜಾತ್ರೆಯಿಂದ ಜೋಡಿ ಬುಲ್‌ಡಾಗ್‌ಗಳನ್ನು ಖರೀದಿಸಲಾಗಿತ್ತು. ಶಿವಾನಿಗೆ ಇಬ್ಬರು ಸಹೋದರರಿದ್ದು, ಆಕೆ ಮನೆಯ ಕಿರಿಯವಳಾಗಿದ್ದಳು ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 8
Wow Wow 0