ಡಿ.7 ರಂದು ಪಾಲಿಬೆಟ್ಟದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ
ಪಾಲಿಬೆಟ್ಟ : ಲಯನ್ಸ್ ಕ್ಲಬ್ ಪಾಲಿಬೆಟ್ಟ ಮತ್ತು ಇಕ್ಷಾ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಡಿಸೆಂಬರ್ 7 ರಂದು ಅನುಗ್ರಹ, ಲಯನ್ಸ್ ಸೇವಾ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಶಿಬಿರದಲ್ಲಿ ನೇತ್ರ ತಜ್ಞರಾದ ಡಾ ಎ ಜಿ ಚಿನ್ನಪ್ಪ ಹಾಗೂ ಡಾ. ಎಂ.ಎನ್. ಗುರುಪ್ರಸಾದ್ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ ಎಸ್ ಸುಬ್ರಮಣಿ ಮನವಿ ಮಾಡಿದರು .