ಸ್ವಾತಂತ್ರ್ಯ ಹೋರಾಟಗಾರ, ಬಲಿದಾನ ನಿತ್ಯ ಸ್ಮರಿಸುವಂತಾಗಬೇಕು: ಸದಾ ಅಪ್ಪಚ್ಚು
admincoorgdaily

ವಿರಾಜಪೇಟೆ:ಆ:15: ೮೦ ರ ಸ್ವಾತಂತ್ರ್ಯ ಉತ್ಸವ ವಿವಿಧ ಕಾರ್ಯಕ್ರಮಗಳೋಂದಿಗೆ ಅರ್ಥಪೂರ್ಣವಾಗಿ ಆಚರಿಸಿದ ರಿಕ್ರೀಯೆಷನ್ ಸಂಸ್ಥೆ. ಕಾವೇರಿ ರಿಕ್ರೀಯೆಷನ್ ಅಸೋಸಿಯೇಷನ್ ಅಮ್ಮತ್ತಿ ವತಿಯಿಂದ ಅಮ್ಮತ್ತಿ ಕೊಡವ ಸಮಾಜದ ಆವರಣದಲ್ಲಿ 80ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಯ ಅದ್ಯಕ್ಷರಾದ ಮೊಳ್ಳೇರ ಸದಾ ಅಪ್ಪಚ್ಚು ಅವರು, 80ರ ಸ್ವತಂತ್ರ ಉತ್ಸವ ಆಚರಿಸುವ ಶುಭ ಗಳಿಗೆಯಲ್ಲಿ ದೇಶವು ತಂತ್ರಜ್ಞಾನ ವಿಜ್ಞಾನ, ಕೃಷಿ ಪದ್ದತಿಯಲ್ಲಿ ಉನ್ನತವಾದ ಸಾಧನೆಗೈದಿದೆ. ವಿಶ್ವದಲ್ಲಿ ಭಾರತದ ಸ್ಥಾನಮಾನ ಉನ್ನತವಾದ ಸ್ಥಿತಿಯಲ್ಲಿದೆ ಇದಕ್ಕೆ ಕಾರಣ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು. ಸ್ವತಂತ್ರ ಹೋರಾಟದಲ್ಲಿ ಮಡಿದ ವೀರ ಯೋಧರು ಹಾಗೂ ವನಿತೆಯರ ಹೋರಾಟದ ಕರಳ ದಿನಗಳನ್ನು ನೆನಪಿಸುವಂತಾಗಬೇಕು. ತ್ಯಾಗ ಬಲಿದಾನಗಳ ಸ್ಮರಣೆ ನಿತ್ಯನೂತನವಾಗಬೇಕು. ಸಂಸ್ಥೆ ಸ್ಥಾಪನೆಯಾಗಿ 48 ವರ್ಷಗಳು ಸಂದಿದ್ದು ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾದಕರನ್ನು ಗುರುತಿಸಿ ಸನ್ಮಾನಿಸುವುದು ಸಂಸ್ಥೆ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಮದ್ಯೆ ಎರಡು ವರ್ಷಗಳು ಕಾರ್ಯಕ್ರಮ ಸ್ಥಗಿತಗೊಂಡಿತು. ಸಂಸ್ಥೆಯ ಸದಸ್ಯರ ಸಹಕಾರದಿಂದ ಪ್ರಸ್ತುತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಸಂಸ್ಥೆ ಚಿರ ಋಣಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ, ಶೈಕ್ಷಣಿಕ ಕ್ಷೇತ್ರದ ಚೋವಂಡ ಚೊಂದಮ್ಮ, ಕ್ರೀಡಾ ಕ್ಷೇತ್ರದಲ್ಲಿ ಕೇಚಂಡ ಪ್ರಸನ್ನ ಮತ್ತು ರ್ಯಾಲಿ ಪಟು ಉದ್ದಪಂಡ ಚೇತನ್ ಚಂಗಪ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರು, ಪುರುಷರು, ಹಾಗೂ ಮಕ್ಕಳಿಗೆ ಪಾಸಿಂಗ್ ದ ಬಾಲ್, ಕೊಡವ ಒಲಗ ನೃತ್ಯ, ಬೆಲೋನ್ ಗೆ ಗುಂಡು ಹೊಡೆಯುವ ಸ್ಪರ್ಧೆ, ಮಕ್ಕಳಿಗೆ ಮಿಠಾಯಿ ಹೆಕ್ಕುವುದು, ಮತ್ತು ವಿವಿಧ ಸ್ಪರ್ಧೆಗಳು ಅಯೋಜಿಸಲಾಗಿತ್ತು. ನಂತರ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾವೇರಿ ರಿಕ್ರೀಯೆಷನ್ ಅಸೋಸಿಯೇಷನ್ ಯ ಉಪದ್ಯಕ್ಷ ಸಂಪತ್ ದೇವಯ್ಯ, ಕಾರ್ಯದರ್ಶಿಗಳಾದ ಕುಂಞಂಡ ದೇವಯ್ಯ, ನಿರ್ದೇಶಕರಾದ ಕುಟ್ಟಂಡ ಬೋಜಿ ಅಯ್ಯಪ್ಪ, ಉದ್ದಪಂಡ ಶಂಭು ಕಾವೇರಪ್ಪ, ಮಂಡೇಪಂಡ ಸಚಿನ್, ಅಲ್ಲಪ್ಪಿರ ಜುಮುರು ಕಾರ್ಯಪ್ಪ, ಮಂಡೇಪಂಡ ಪೊನ್ನು ಪೊನ್ನಪ್ಪ, ಮೂಕೊಂಡ ಚರ್ಮಣ, ಮಾಚಿಮಂಡ ಸುವೀನ್ ಗಣಪತಿ, ಉಪಸ್ಥಿತರಿದ್ದರು.
ಮೂಕೊಂಡ ಹಿತಾ ಅವರು ಪ್ರಾರ್ಥಿಸಿ ಸುವಿನ್ ಗಣಪತಿ ಕಾರ್ಯಕ್ರಮ ಸ್ವಾಗತಿಸಿ ನಿರೋಪಿಸಿದರು, ಜುಮುರು ಕಾರ್ಯಪ್ಪ ಅವರು ವಂದಿಸಿದರು. ಕೊಡವ ಸಮಾಜ ಅದ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಕಾವೇರಿ ರಿಕ್ರೀಯೆಷನ್ ಅಸೋಸಿಯೇಷನ್ ಅಮ್ಮತ್ತಿ ಯ ಸದಸ್ಯರು ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು. ವರದಿ:ಕಿಶೋರ್ ಕುಮಾರ್ ಶೆಟ್ಟಿ