ಫ್ರೆಂಡ್ಸ್ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-1;ಕೂರ್ಗ್  ಸ್ಟಾರ್ 40ಎಕ್ರೆ ಚಾಂಪಿಯನ್

ಫ್ರೆಂಡ್ಸ್ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-1;ಕೂರ್ಗ್  ಸ್ಟಾರ್ 40ಎಕ್ರೆ ಚಾಂಪಿಯನ್

ಸಿದ್ದಾಪುರ :-ವಿ. ಟಿ. ಟಿ. ಪ್ರಯೋಜಕತ್ವದಲ್ಲಿ ಆಯೋಜಿಸಲಾದ ಫ್ರೆಂಡ್ಸ್ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-1 ಪಂದ್ಯಾವಳಿ 40 ಎಕ್ರೆ ವಾಸು ಅವರ ಮೈದಾನದಲ್ಲಿ ಮಾರ್ಚ್ 28, 29 ಹಾಗೂ 30ರಂದು ಹೊನಲು ಬೆಳಕಿನಲ್ಲಿ ಭರ್ಜರಿಯಾಗಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಪ್ರಮುಖ ಪ್ರಯೋಜಕರಾದ ಸಂತೋಷ್ ಅವರ ತಂದೆ ಸಾಲು ಅವರು ನೆರವೇರಿಸಿದರು. ಮೂರು ದಿನಗಳ ಕಾಲ ನಡೆದ ಈ ಲೀಗ್‌ನಲ್ಲಿ ವಿವಿಧ ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ಒದಗಿಸಿವೆ. ಸೋಮವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಕೂರ್ಗ್ ಸ್ಟಾರ್ 40 ಎಕ್ರೆ ತಂಡ ಪ್ರಥಮ ಸ್ಥಾನ ಪಡೆದು ₹75,000 ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

ಟಿಬೇಟಿಯನ್ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನ ಪಡೆದು ₹40,000 ನಗದು ಹಾಗೂ ಟ್ರೋಫಿ ಪಡೆದಿತು. ನೆಲ್ಯಹುದಿಕೇರಿ ರಾಯಲ್ ಬ್ರದರ್ಸ್ ತಂಡ ತೃತೀಯ ಸ್ಥಾನ ಹಾಗೂ ಕಿಂಗ್ ಮೇಕರ್ ನೆಲ್ಯಹುದಿಕೇರಿ ತಂಡ ಚತುರ್ಥ ಸ್ಥಾನ ಪಡೆದುಕೊಂಡವು.

ವೈಯಕ್ತಿಕ ಪ್ರಶಸ್ತಿಗಳಲ್ಲಿ ಕೀರ್ಗ್ ಸ್ಟಾರ್ ತಂಡದ ಡಿಲ್ಲು ಫೈನಲ್ ಪಂದ್ಯಶ್ರೇಷ್ಠ  ಪ್ರಶಸ್ತಿ ಪಡೆದರು. ನೌಷಾದ್ ಡಿ.ಜೆ. (ವಿರಾಜಪೇಟೆ) ಬೆಸ್ಟ್ ವಿಕೆಟ್ ಕೀಪರ್, ರಾಜೇಶ್ ಬೆಟ್ಟಡಕಾಡು ಬೆಸ್ಟ್ ಫೀಲ್ಡರ್, ಇಮ್ತಿಯಾಝ್ (ವಿರಾಜಪೇಟೆ) ಬೆಸ್ಟ್ ಬೌಲರ್ ಹಾಗೂ ಮಹೇಶ್ (ವಿರಾಜಪೇಟೆ) ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಪಡೆದರು. ನಿಶಾದ್ ಹುಂಡಿ ಅವರು ಮ್ಯಾನ್ ಆಫ್ ದಿ ಸೀರಿಯಸ್ ಗೌರವಕ್ಕೆ ಪಾತ್ರರಾದರು.

ಈ ಕ್ರೀಡಾಕೂಟವನ್ನು 38 ವರ್ಷ ಮೇಲ್ಪಟ್ಟ ಆಟಗಾರರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದು, ವಿರಾಜಪೇಟೆ, ಕುಶಾಲನಗರ, ಸಿದ್ದಾಪುರ ಸೇರಿದಂತೆ ಕೊಡಗಿನ ವಿವಿಧ ಭಾಗಗಳಿಂದ ಹಳೆಯ ಆಟಗಾರರು ಭಾಗವಹಿಸಿ ಪಂದ್ಯಾವಳಿಗೆ ವಿಶೇಷ ಮೆರಗು ತಂದರು. ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಪ್ರಮುಖ ದಾನಿಗಳು, ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ಕ್ರೀಡಾಕೂಟವನ್ನು ಮುಸ್ತಫಾ, ಸಂಜು, ರಫೀಕ್ ಮತ್ತು ಶಿಯಾಬ್ ಅವರು ಯಶಸ್ವಿಯಾಗಿ ಆಯೋಜಿಸಿದರು.