Kodagu

ಏಪ್ರಿಲ್ 15ರಿಂದ 17ರವರೆಗೆ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲಗಳು

admincoorgdaily

ಏಪ್ರಿಲ್ 15ರಿಂದ 17ರವರೆಗೆ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲಗಳು

ಗೋಣಿಕೊಪ್ಪ: ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲಗಳು ಏಪ್ರಿಲ್ 15ರಿಂದ 17ರ ವರೆಗೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಏಪ್ರಿಲ್ 15ರಂದು ಕುಲ್ಲಚೆಟ್ಟಿ ಐನ್‌ಮನೆಯಲ್ಲಿ ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆ, ಪೂಜಾ ಕಾರ್ಯಗಳು ನಡೆಯಲಿದೆ.

ನಂತರ ಸಂಜೆ, ಅರೆಭಾಷೆ ಗೌಡ ಜನರ ಪ್ರಮುಖ ದೈವವಾದ ಬಚ್ಚನಾಯಕ ಆರಾಧನೆ ಮತ್ತು ಕೋಲ, ಜತೆಗೆ ಹುಲಿ ಚಾಮುಂಡಿ, ಇತರೆ ಶ್ರೀ ಧರ್ಮ ದೇವತೆಗಳು, ಕೋಲಗಳು ನಡೆಯಲಿದೆ. 16 ರಂದು ಬೆಳಗೆ 10ಕ್ಕೆ ಧರ್ಮ ದೇವತೆ, ಸೀರಾಡಿ ದೈವದ ಕೋಲ ನಡೆಯಲಿದೆ. 17 ರಂದು, ಪಾಷಣಮೂರ್ತಿ, ಪಂಜುರ್ಲಿ ಸೇರಿದಂತೆ ಹಲವು ಕೋಲಗಳು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.