ಕೊಡಗಿನಲ್ಲಿ ಹಾಕಿ ಅಕಾಡೆಮಿ ಸ್ಥಾಪನೆಗೆ ಸಂಪೂಣ೯ ಸಹಕಾರ; ಕೇಂದ್ರ ಸಚಿವ ಡಾ.ಮನ್ಸೂಕ್ ಮಾಂಡವಿಯಾ

May 2, 2026 - 14:24
 0  285
ಕೊಡಗಿನಲ್ಲಿ ಹಾಕಿ ಅಕಾಡೆಮಿ ಸ್ಥಾಪನೆಗೆ ಸಂಪೂಣ೯ ಸಹಕಾರ; ಕೇಂದ್ರ ಸಚಿವ ಡಾ.ಮನ್ಸೂಕ್ ಮಾಂಡವಿಯಾ
ಮಾಂಡವಿಯಾ

ನಾಪೋಕ್ಲು;ಕೊಡಗಿನಲ್ಲಿ ಕ್ರೀಡಾಬೆಳವಣಿಗೆಯ ನಿಟ್ಟಿನಲ್ಲಿ ಕೇಂದ್ರ ಕ್ರೀಡಾ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ದವಾಗಿದೆ. ಕೊಡಗಿನಲ್ಲಿ ಹಾಕಿ ಅಕಾಡೆಮಿ ಸ್ಥಾಪಿಸಿದ್ದೇ ಆದಲ್ಲಿ ಕೇಂದ್ರ ಸಕಾ೯ರದಿಂದ ಎಲ್ಲಾ ಸೌಲಭ್ಯ ನೀಡಲು ಬದ್ದ ಎಂದು ಕೇಂದ್ರ ಸಕಾ೯ರದ ಕ್ರೀಡಾ ಸಚಿವ ಡಾ. ಮನ್ಸೂಕ್ ಮಾಂಡವಿಯಾ ಘೋಷಿಸಿದ್ದಾರೆ

ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ಆಯೋಜಿತ 26 ನೇ ವಷ೯ದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯಾಟದ ಸಭಾ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.

ಕ್ರೀಡೆಯನ್ನು ಕ್ರೀಡಾಪಟುಗಳ ಉತ್ತೇಜನಕ್ಕೆ ಬಳಸಬೇಕೇ ವಿನಾ ರಾಜಕೀಯಕ್ಕೆ ಬಳಸಬಾರದು ಎಂದು ಅಭಿಪ್ರಾಯಪಟ್ಟ ಸಚಿವರು, ಗ್ರಾಮೀಣ ಪ್ರದೇಶ ಸೇರಿದಂತೆ ಭಾರತದಾದ್ಯಂತಲಿನ ಕ್ರೀಡಾಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಎಲ್ಲರೂ ಒಗ್ಗೂಡಬೇಕು. ಎಂದು ಕರೆ ನೀಡಿದರು. ಪ್ರತಿಭೆ ಎಂಬುದನ್ನು ಗೋಲುಗಳ ಆಧಾರದಲ್ಲಿ ಪರಿಗಣಿಸದೇ ಕ್ರೀಡಾಕೌಶಲ್ಯದ ಆಧಾರದಲ್ಲಿ ಗಮನಿಸಬೇಕೆಂದು ಸಚಿವರು ನುಡಿದರು.

ಮುಂದಿನ ವಷ೯ಗಳಲ್ಲಿ ಒಲಂಪಿಕ್ ಕ್ರೀಡಾಕೂಟ ಆಯೋಜನೆ ನಿಟ್ಟಿನಲ್ಲಿ ಕೇಂದ್ರ ಸಕಾ೯ರ ಯೋಜನೆ ರೂಪಿಸುತ್ತಿದೆ ಎಂದೂ ಕ್ರೀಡಾ ಸಚಿವರಾದ ಸಚಿವ ಡಾ. ಮನ್ಸೂಕ್ ಮಾಂಡವಿಯಾ ಈ ಸಂದಭ೯ ಹೇಳಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಭಾರತದ ಕ್ರೀಡಾಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರವಾಗಿದ್ದು ಕೊಡಗು ಜಿಲ್ಲೆಯ ಬಾಡಗ ಗ್ರಾಮದಲ್ಲಿ 12 ಎಕ್ರೆ ಜಾಗದಲ್ಲಿ ನಿಮಾ೯ಣವಾಗುತ್ತಿರುವ ಸುಸಜ್ಜಿತ ಕ್ರೀಡಾಸಂಕೀಣ೯ಕ್ಕೆ ಕೇಂದ್ರ ಕ್ರೀಡಾ ಇಲಾಖೆಯಿಂದ ಸೂಕ್ತ ಅನುದಾನ ನೀಡುವಂತೆ ಕೋರಿದರು.  

ಸಂಸದ ಯದುವೀರ್ ಒಡೆಯರ್, ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಮೂಲಕ ಕೊಡವ ಸಮುದಾಯದ ಸೌಹಾದ೯ತೆ ಹೆಚ್ಚಾಗಿದೆ. ದೇಶದಲ್ಲಿಯೇ ಈ ಪಂದ್ಯಾಟ ಗಮನ ಸೆಳೆದಿದೆ ಎಂದರು. ಸವೋ೯ಚ್ಚ ನ್ಯಾಯಾಲಯದ ನಿವೖತ್ತ ನ್ಯಾಯಾಧೀಶ ಎ. ಬೋಪಣ್ಣ, ಕನಾ೯ಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಿ.ಕೆ.ಬೋಪಣ್ಣ , ಚೇನಂಡ ಕುಟುಂಬದ ಪ್ರಮುಖರೂ ಸೇರಿದಂತೆ ಗಣ್ಯರು ಹಾಜರಿದ್ದರು.

 ಹಾಕಿ ಪಂದ್ಯಾಟದ ಫೈನಲ್ ಪಂದ್ಯಾಟ ವೀಕ್ಷಣೆಗೆ ನಾಪೋಕ್ಲು ಮೈದಾನದಲ್ಲಿ ಕ್ರೀಡಾಪ್ರೇಮಿಗಳು ಕಿಕ್ಕಿರಿದು ಸೇರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0