ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಾದ ಅನುದಾನ ದುರ್ಬಳಕೆಯಾಗಿದೆ;ಸಮಗ್ರ ತನಿಖೆಗೆ ಜೇನು ಕುರುಬ ಅಭಿವೃದ್ಧಿ ಸಂಘ ಒತ್ತಾಯ
admincoorgdaily

ಮಡಿಕೇರಿ: ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಾದ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ, ಕೊಡಗು ಜಿಲ್ಲೆಯಾದ್ಯಂತ ಸಮಗ್ರ ತನಿಖೆಗೆ ಜೇನು ಕುರುಬ ಅಭಿವೃದ್ಧಿ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಜೆ.ಟಿ.ಕಾಳಿಂಗ ಮಾತನಾಡಿ, ಸೋಮವಾರಪೇಟೆ ತಾಲೂಕು ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯಲ್ಲಿ ITDP ಮೂಲಕ KRIDL ಗೆ ನೀಡಲಾದ ಅಂದಾಜು ₹15 ಲಕ್ಷ ಅನುದಾನದ ಕಾಮಗಾರಿಗಳಲ್ಲಿ ಲೋಪಗಳಿವೆ. ಈ ಕುರಿತು ಜಿ.ಪಂ CEO ಮತ್ತು KRIDL ಬೆಂಗಳೂರು ಕಚೇರಿಗೆ ದೂರು ನೀಡಲಾಗಿದೆ. ಮಾಹಿತಿ ಕೇಳಿದರೂ KRIDL ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ತನಿಖೆ ಮುಗಿಯುವವರೆಗೆ ಸಂಬಂಧಿತ ಕಾಮಗಾರಿಗಳ ಹಣ ಬಿಡುಗಡೆ ನಿಲ್ಲಿಸಬೇಕು. ಜಿಲ್ಲೆಯ ಎಲ್ಲಾ KRIDL ಕಾಮಗಾರಿಗಳ ಪರಿಶೀಲನೆ, ದಾಖಲೆಗಳ ಬಹಿರಂಗ, ಸ್ವತಂತ್ರ ತನಿಖೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಹೇಶ್, ವಿಶ್ವ ಉಪಸ್ಥಿತರಿದ್ದರು.