Kodagu

ಮೃತಪಟ್ಟ ಕಾಡಾನೆಯ ಅಂತ್ಯಸಂಸ್ಕಾರ

admincoorgdaily

ಮೃತಪಟ್ಟ ಕಾಡಾನೆಯ ಅಂತ್ಯಸಂಸ್ಕಾರ

ನಾಪೋಕ್ಲು: ಅನಾರೋಗ್ಯದಿಂದ ಮೃತಪಟ್ಟ ಕಾಡಾನೆಯ ಅಂತ್ಯಸಂಸ್ಕಾರ ಮಂಗಳವಾರ ಕೊಳಕೇರಿ ಗ್ರಾಮದ. ಬೊಮ್ಮಂಜಕೇರಿಯ ಅಚ್ಛಾಂಡಿರ ಕಾರ್ಯಪ್ಪನವರ ಗದ್ದೆಯಲ್ಲಿ ಅಂತ್ಯಸಂಸ್ಕಾರ ಜರುಗಿತು.

ಸೋಮವಾರ ರಾತ್ರಿ ಸುಮಾರು ಏಳುನೂರು ಮೀಟರ್ ನಷ್ಟು ದೂರ ಆನೆಯಶವನ್ನು ಟ್ರ್ಯಾಕ್ಟರ್ ಮೂಲಕ ಎಳೆದು ತರಲಾಯಿತು ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಅಂತ್ಯ ಸಂಸ್ಕಾರ ಮಾಡಲಾಯಿತು. ಪಶು ವೈದ್ಯಾಧಿಕಾರಿ ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು.

ಈ ಸಂದರ್ಭ ಸ್ಥಳೀಯರು ಮೃತ ಆನೆಗೆ ಪೂಜೆ ಸಲ್ಲಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂತಿಲ್ ಕುಮಾರ್ ವಲಯ ಅರಣ್ಯ ಅಧಿಕಾರಿ ಶಂಕರ್ ಉಪವಲಯ ಅರಣ್ಯಾಧಿಕಾರಿಗಳಾದ ಫಿರೋಜ್ ಖಾನ್ ,ಕಾಳೇಗೌಡ ಅರಣ್ಯ ರಕ್ಷಕರಾದ ಶರತ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಗ್ರಾಮಸ್ಥರಾದ ಪುಲ್ಲೆರ ವಿನುಚಿಟ್ಟಿಯಪ್ಪ ,ಭೀಮಯ್ಯ, ಕುಶಾಲಪ್ಪ, ಅರುಣ ,ಅಚ್ಛಾಂಡಿರ ಮಧು, ಮಂದಣ್ಣ, ಮನೋಜ್ ,ಅಚ್ಚಪಂಡ ರಾಜಪ್ಪ, ಪ್ರಜ್ವಲ್ ಕೇಟೋಳಿರ ಸನ್ನಿ, ತಂಬಂಡ ಶಾಮ ಅಯ್ಯಪ್ಪ ಸೇರಿದಂತೆ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು. ಉಪವಲಯ ಅರಣ್ಯಾಧಿಕಾರಿ ಫಿರೋಜ್ ಖಾನ್ ಪ್ರತಿಕ್ರಿಯಿಸಿ ಮರಣೋತ್ತರ ಪರೀಕ್ಷೆಯಲ್ಲಿ ಕಾಡಾನೆಗೆ ಕರುಳು ಸಮಸ್ಯೆ ಇದ್ದುದುಕಂಡುಬಂದಿದೆ 15 -16 ವರ್ಷದ ಗಂಡಾನೆ ಇದಾಗಿದ್ದು ಕೊಂಬನ್ನು ಭಾಗಮಂಡಲದಲ್ಲಿ ಸಂರಕ್ಷಿಸಿ ತಿಳಿಸಲಾಗಿದೆ.

ಆನೆಯ ಅಂಗಾ0ಗಳನ್ನು ಹೆಚ್ಚಿನ ಮಾಹಿತಿಗಾಗಿ ಮೈಸೂರಿನ ಪಶು ವೈದ್ಯ ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿಕೊಡಲಾಗುವುದು ಎಂದರು. ಕೊಳಕೇರಿ ಗ್ರಾಮದ ಬೊಮ್ಮಂಜಿಕೆರೆ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಬೀಡು ಬಿಟ್ಟಿದ್ದ ಕಾಡಾನೆಯೊಂದು ಸೋಮವಾರ ಮೃತಪಟ್ಟಿತ್ತು. ಕಾಡಾನೆ ಅನಾರೋಗ್ಯದಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದು ಭಾನುವಾರ ಪ್ರಯತ್ನ ಪಟ್ಟರೂ ಓಡಿಸಲು ಸಾಧ್ಯವಾಗಿರಲಿಲ್ಲ. ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆನೆ ಮೃತಪಟ್ಟಿರುವುದನ್ನು ದೃಢೀಕರಿಸಿದ್ದರು.