Kodagu

ಗದ್ದೆಹಳ್ಳ: ಬಾರ್‌ನಲ್ಲಿ 37 ಸಾವಿರ ನಗದು ಕಳ್ಳತನ

admincoorgdaily

ಗದ್ದೆಹಳ್ಳ: ಬಾರ್‌ನಲ್ಲಿ 37 ಸಾವಿರ ನಗದು ಕಳ್ಳತನ

ಸುಂಟಿಕೊಪ್ಪ: ಗದ್ದೆಹಳ್ಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ವಂದನಾ ಬಾರ್‌ನಲ್ಲಿ ಮಧ್ಯರಾತ್ರಿ ಕಳ್ಳರು ಬೀಗ ಮುರಿದು ಒಳನುಗ್ಗಿ ಗಲ್ಲಾ ಪೆಟ್ಟಿಗೆಯಲ್ಲಿದ್ದ 37 ಸಾವಿರ ರೂ. ನಗದನ್ನು ಕಳವು ಮಾಡಿರುವ ಘಟನೆ ಆಗಸ್ಟ್ 12 ಮಂಗಳವಾರ ರಾತ್ರಿ ನಡೆದಿದೆ.

ಮಧ್ಯರಾತ್ರಿ ವೇಳೆ ಕಳ್ಳರು ಬಾರ್‌ನ ಬೀಗ ಮುರಿದು ಒಳಗೆ ಪ್ರವೇಶಿಸಿ, ಗಲ್ಲಾ ಪೆಟ್ಟಿಗೆಯಲ್ಲಿ ಇರಿಸಿದ್ದ ನಗದನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ಬಾರ್‌ನ ಬಾಗಿಲು ತೆರೆಯಲು ಬಂದ ಸಂದರ್ಭದಲ್ಲಿ ಕಳ್ಳತನ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.