ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ನಲ್ಲಿ ಚಿನ್ನದ ಪದಕ ಪಡೆದ ಚೆಯ್ಯಂಡಾಣೆಯ ಗಗನ್ ಮೇದಪ್ಪ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಪಂಜಾಬ್ ನ ಭತಿಂಡಾದ ಗುರು ಕಾಶಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 45ನೇ ವೆಟರ್ನ್ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಚೆಯ್ಯಂಡಾಣೆ ಚೇಲಾವರ ಗ್ರಾಮದ ಗಗನ್ ಮೇದಪ್ಪ ಭಾಗವಹಿಸಿ 200 ಮೀಟರ್ ಓಟ,100 ಮೀಟರ್ ಅಡೆ ತಡೆ ಓಟ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನಗಳಿಸಿ ಮೂರು ಚಿನ್ನದ ಪದಕ ಪಡೆದು ಸಾಧನೆ ಮಾಡಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮುಂದೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗಗನ್ ಭಾಗವಹಿಸಲಿದ್ದಾರೆ.ಗಗನ್ ಮಡಿಕೇರಿ ತಾಲೂಕಿನ ಚೆಯ್ಯಂಡಾಣೆಯ ಚೇಲಾವರ ಗ್ರಾಮದ ಪಟ್ಟಚೆರುವಂಡ ಜಿಮ್ಮ ಚಿಟ್ಟಿಯಪ್ಪ ಹಾಗೂ ದಿವಂಗತ ಕಾವೇರಮ್ಮ ದಂಪತಿಗಳ ಪುತ್ರನಾಗಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
1
