ಮಾಯಮುಡಿ ಸರ್ಕಾರಿ ಶಾಲೆಗೆ ನೂತನ ಬ್ಯಾಂಡ್ ಸೆಟ್ ಕೊಡುಗೆ
ಪೊನ್ನಂಪೇಟೆ: ತಾಲೂಕಿನ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಶಾಲೆಯ ಮುಖ್ಯೋಪಾಧ್ಯಾಯಿನಿ, ಹೆಚ್.ಸಿ. ಜಯಮ್ಮ ನವರು ಹದಿನೈದು ಸಾವಿರ ರೂಪಾಯಿ ಮೌಲ್ಯದ ಬ್ಯಾಂಡ್ ಸೆಟ್ ಯನ್ನು ಶಾಲೆಗೆ ಕೊಡುಗೆ ನೀಡಿದ್ದಾರೆ. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರು ಮತ್ತು ಸದಸ್ಯರು,ಶಾಲೆಯ ವಿದ್ಯಾರ್ಥಿಗಳ ಪೋಷಕರು, ಹಿರಿಯ ವಿದ್ಯಾರ್ಥಿಗಳ ಸಂಘ, ಇವರ ಈ ಮೆಚ್ಚುಗೆ ವ್ಯಕ್ತಪಡಿಸಿ ಇವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ, ಶಾಲಾ ಮುಖ್ಯೋಪಾಧ್ಯಾಯಿನಿ ಹೆಚ್.ಸಿ ಜಯಮ್ಮ ದೈಹಿಕ ಶಿಕ್ಷಕರಾದ ಎಂ.ಟಿ. ಸತ್ಯ, ಶಿಕ್ಷಕರಾದ ರಾಗಿಣಿ, ಲೀಲಾ,ಎಂ.ಟಿ ಸುಮಾ, ಲಾಯ್ಡ್, ಲಾವಣ್ಯ, ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
