National News

ಅತಿಯಾದ ಮೊಬೈಲ್ ಬಳಕೆ ಪ್ರಶ್ನಿಸಿದ್ದಕ್ಕೆ ತಾಯಿಗೆ ಚಾಕುವಿನಿಂದ ಇರಿದ ಬಾಲಕಿ!

admincoorgdaily

ಆಲಪ್ಪುಳ (ಕೇರಳ): ಅತಿಯಾದ ಮೊಬೈಲ್ ಫೋನ್ ಬಳಕೆಯನ್ನು ಪ್ರಶ್ನಿಸಿದ್ದಕ್ಕಾಗಿ, 17 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಗೆ ಚಾಕುವಿನಿಂದ ಇರಿದು ದಾಳಿ

ನಡೆಸಿದ ಘಟನೆ ಆಲಪ್ಪುಳ ಜಿಲ್ಲೆಯ ವಡಕ್ಕಲ್‌ನಲ್ಲಿ ನಡೆದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಅಪ್ರಾಪ್ತ ಬಾಲಕಿ ಪ್ಲಸ್ ಒನ್ ವಿದ್ಯಾರ್ಥಿನಿ. ತಾಯಿಯು ಮಗಳ ಮೊಬೈಲ್ ಬಳಕೆಯನ್ನು ಪ್ರಶ್ನಿಸಿದ್ದರಿಂದ ಮಾತಿಗೆ ಮಾತು ಬೆಳೆದು, ಕೋಪಗೊಂಡ ಮಗಳು ಅಡುಗೆಮನೆಯಲ್ಲಿದ್ದ ಚಾಕುವಿನಿಂದ ತಾಯಿಗೆ ಇರಿದಿದ್ದಾಳೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಮಹಿಳೆಯನ್ನು ತಕ್ಷಣ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

“ಮೊಬೈಲ್ ವಿವಾದದ ಹಿನ್ನೆಲೆಯಲ್ಲಿ ಮಗಳು ತಾಯಿಗೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ ಎಂಬುದು ನಮಗೆ ಬಂದ ಪ್ರಾಥಮಿಕ ಮಾಹಿತಿ. ಆದರೆ ನಿಜಸ್ಥಿತಿ ಇನ್ನೂ ದೃಢಪಡಿಸಬೇಕಿದೆ. ಗಾಯಗೊಂಡ ಮಹಿಳೆಯ ಆರೋಗ್ಯ ಸುಧಾರಿಸಿದ ಬಳಿಕ ಅವರ ಅಧಿಕೃತ ಹೇಳಿಕೆ ದಾಖಲಿಸಲಾಗುವುದು. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.