National News

ಗರ್ಲ್ ಫ್ರೆಂಡ್ ಮನೆಯವರಿಂದ ಲವ್ವರ್ ಮೇಲೆ ಹಲ್ಲೆ; ಬೆತ್ತಲೆಗೊಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ!

admincoorgdaily

ಲಖಿಂಪುರ ಖೇರಿ (ಉ.ಪ್ರ): ಯುವಕನೊಬ್ಬನನ್ನು ಗೆಳತಿಯ ಮನೆಯವರು ಕ್ರೂರವಾಗಿ ಥಳಿಸಿ, ವಿವಸ್ತ್ರಗೊಳಿಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ಅವಮಾನಿಸಿರುವ ನಾಚಿಕೆಗೇಡಿತನದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

 ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪ್ರಕರಣ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ರಾಜು ಯಾದವ್ ಎಂಬ ಯುವಕನನ್ನು ವಿಧವೆಯೊಬ್ಬಳು ತನ್ನ ಮನೆಗೆ ಆಹ್ವಾನಿಸಿದ್ದಳು. ಅಲ್ಲಿ ಸತ್ಯೇಂದ್ರ ಯಾದವ್, ಪುನೀತ್ ಯಾದವ್, ಜಸ್ವಿಂದ್, ಜಿತೇಂದ್ರ ಮತ್ತು ಸುಮಿತ್ ಯಾದವ್ ಸೇರಿದಂತೆ ಆಕೆಯ ಕುಟುಂಬದವರು ಅವನ ಮೇಲೆ ದಾಳಿ ನಡೆಸಿದ್ದಾರೆ. ಯುವಕನ ತಲೆಯನ್ನು ಬೋಳಿಸಿ, ಬಿಸಿ ಕಬ್ಬಿಣದ ತವಾದ ಮೇಲೆ ಕುಳ್ಳಿರಿಸಿ, ಬಳಿಕ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಅವಮಾನ ಮಾಡಿದ್ದಾರೆ.

 ಸ್ಥಳದಲ್ಲಿದ್ದ ಕೆಲವರು ಘಟನೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.